ಬೆಂಗಳೂರು: ವೈದ್ಯಕೀಯ ಪದವಿ ಪ್ರವೇಶಕ್ಕೆ ದೇಶಾದ್ಯಂತ ನಿರೀಕ್ಷಿತವಾಗಿರುವ ನೀಟ್ ಯುಜಿ 2025 ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇಂದು ಪ್ರಕಟಿಸಿದೆ. ಈ ಬಾರಿ ದೇಶದಾದ್ಯಂತ 22.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 12.36 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.
ಈ ವರ್ಷ ರಾಷ್ಟ್ರ ಮಟ್ಟದಲ್ಲಿ ಮೊದಲ ಸ್ಥಾನವನ್ನು ರಾಜಸ್ಥಾನದ ಮಹೇಶ್ ಕುಮಾರ್ ಪಡೆದಿದ್ದಾರೆ. ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ಎರಡನೇ ಸ್ಥಾನ ಮತ್ತು ದೆಹಲಿಯ ಅವಿಕಾ ಅಗರ್ವಾಲ್ ಮಹಿಳಾ ವಿಭಾಗದ ಟಾಪರ್ ಆಗಿದ್ದಾರೆ. ಇನ್ನು ಕರ್ನಾಟಕದ ನೀಖಿಲ್ ಸೋನದ್ 17ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಈ ಬಾರಿ ಕರ್ನಾಟಕದ 1,47,782 ವಿದ್ಯಾರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 1,42,369 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 83,582 ವಿದ್ಯಾರ್ಥಿಗಳು ನೀಟ್ ಅರ್ಹತೆ ಪಡೆದಿದ್ದು, ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಗೌರವದ ಸಾಧನೆಯಾಗಿದೆ.
ಮೆರುಗು ತಂದಿರುವ ನಿಖಿಲ್ ಸೋನದ್ ರಾಷ್ಟ್ರ ಮಟ್ಟದಲ್ಲಿ 17ನೇ ರ‍್ಯಾಂಕ್ ಪಡೆದುಕೊಂಡಿದ್ದು, ರಾಜ್ಯದ ಹೆಮ್ಮೆ ಹೆಚ್ಚಿಸಿದ್ದಾರೆ. ಅವರ ಜೊತೆಗೆ ಟಾಪ್ 100 ರ‍್ಯಾಂಕ್ ಗಳಿಸಿದ ಕನ್ನಡಿಗರ ಪಟ್ಟಿಯೂ ಈ ಕೆಳಕಂಡಂತಿದೆ:
- ನಿಖಿಲ್ ಸೋನದ್ – 17ನೇ ರ‍್ಯಾಂಕ್
- ರುಚಿರ್ ಗುಪ್ತಾ – 22ನೇ ರ‍್ಯಾಂಕ್
- ತೇಜಸ್ ಸೈಲೇಶ್ – 38ನೇ ರ‍್ಯಾಂಕ್
- ಪಿ. ಜಾಗಿರ್ದಾರ್ – 42ನೇ ರ‍್ಯಾಂಕ್
- ಹರಿಣಿ ಶರ್ಮಾ – 72ನೇ ರ‍್ಯಾಂಕ್
- ದಿಗಂತ್ – 80ನೇ ರ‍್ಯಾಂಕ್
- ನಿಧಿ ಕೆ.ಜಿ. – 84ನೇ ರ‍್ಯಾಂಕ್
ಮಹತ್ವಪೂರ್ಣ ಅಂಕಿಅಂಶಗಳು:
- ಒಟ್ಟು ನೋಂದಾಯಿತ ವಿದ್ಯಾರ್ಥಿಗಳು: 22,76,069
- ಪರೀಕ್ಷೆಗೆ ಹಾಜರಾದವರು: 22,09,318
- ಪಾಸಾದವರು: 12,36,531
- ಪುರುಷರು: 5,14,063
- ಮಹಿಳೆಯರು: 7,22,462
- ತೃತೀಯ ಲಿಂಗಿಗಳು: 6
ನೀಟ್ ಟಾಪ್ 10 ರ‍್ಯಾಂಕ್ ಪಟ್ಟಿ:
- ಮಹೇಶ್ ಕುಮಾರ್
- ಉತ್ಕರ್ಷ್ ಅವಧಿಯಾ
- ಕೃಶಾಂಗ್ ಜೋಶಿ
- ಮೃಣಾಲ್ ಕಿಶೋರ್ ಝಾ
- ಅವಿಕಾ ಅಗ್ಗರ್ವಾಲ್
- ಜೆನಿಲ್ ವಿನೋದ್‌ಭಾಯಿ ಭಾಯಾನಿ
- ಕೇಶವ್ ಮಿತ್ತಲ್
- ಝಾ ಭಾವ್ಯ ಚಿರಾಗ್
- ಹರ್ಷ್ ಕೆಡವತ್
- ಆರವ್ ಅಗ್ರವಾಲ್














