ಮನೆ ಸುದ್ದಿ ಜಾಲ ಕಲಬುರಗಿಯಲ್ಲಿ ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶರ ಸಾವು

ಕಲಬುರಗಿಯಲ್ಲಿ ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶರ ಸಾವು

0

ಕಲಬುರಗಿ: ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಇಂದು 3ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿಶ್ವನಾಥ್ ವಿ. ಮೂಗತಿ (44) ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಈ ದುರ್ಘಟನೆ ನ್ಯಾಯಾಂಗ ವಲಯದಲ್ಲಿ ಶೋಕದ ಛಾಯೆ ಮೂಡಿಸಿದೆ.

ವಿಶ್ವನಾಥ್ ಮೂಗತಿ ಅವರು ಕೋರ್ಟ್ ಹಾಲ್‌ಗೆ ಪ್ರವೇಶಿಸಬೇಕಿದ್ದ ಕೆಲವೇ ಕ್ಷಣಗಳ ಮೊದಲು ಎದೆಯಲ್ಲಿ ತೀವ್ರ ನೋವಿನಿಂದ ಬಳಲಿದ್ದು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ದೃಢಪಡಿಸಿದರು.

ಅವರನ್ನು ಕೆಲವೇ ದಿನಗಳ ಹಿಂದಷ್ಟೇ ಕಲಬುರಗಿ ಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅವರು ಕೆಲವೊಂದು ದಿನಗಳ ಹಿಂದೆ ಇಲ್ಲಿಗೆ ಹಾಜರಾಗಿದ್ದು, ಕರ್ತವ್ಯವನ್ನು ನಿರ್ವಹಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ ಕೂಡ ಅವರು ಎಂದಿನಂತೆ ಕೋರ್ಟ್‌ಗೆ ಬಂದಿದ್ದರು. ಸಹೋದ್ಯೋಗಿಗಳ ಪ್ರಕಾರ, ಅವರು ಚೆನ್ನಾಗಿಯೇ ಮಾತನಾಡುತ್ತಿದ್ದರು ಮತ್ತು ಆರೋಗ್ಯದ ಬಗ್ಗೆ ಯಾವುದೇ ತೊಂದರೆ ಇರುವ ಸೂಚನೆ ನೀಡಿದಂತಿಲ್ಲ.