ಕುಂದಾಪುರ : ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಕುಂದಾಪುರದ ಹೆಮ್ಮಾಡಿ – ವಂಡ್ಲೆ ರಸ್ತೆಯ ಮಲ್ಲಾರಿ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಸಿಗಂದೂರು ಮೂಲದ ಶರತ್ (25) ಎಂದು ಗುರುತಿಸಲಾಗಿದೆ. ಸಿಗಂದೂರಿಗೆ ಕುಂದಾಪುರಕ್ಕೆ ಸಂಬಂಧಿಕರ ಮನೆಗೆ ಹೋಗುತ್ತಿದ್ದ ವೇಳೆ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿದ ಪರಿಣಾಮ ಕೆಂಚನೂರು ಮಲ್ಲಾರಿ ಬಳಿ ತಿರುವಿನಿಂದ ವಾಹನ ನಿಯಂತ್ರಣ ಕಳೆದುಕೊಂಡಿದೆ.
ಬೈಕ್ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ವಿರುದ್ಧ ಡಿಕ್ಕಿನಲ್ಲಿ ಬರುತ್ತಿದ್ದ ದುರ್ಗಾಂಬಾ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಕೆಲ ದೂರು ಉಜ್ಜಿಕೊಂಡು ಹೋಗಿದೆ. ಈ ವೇಳೆ ಬೆಂಕಿ ಕಿಡಿ ಬಂದು ಬೈಕ್ ಗೆ ಹೊತ್ತಿಕೊಂಡಿದೆ.
ಸದ್ಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.














