ಮನೆ ರಾಜಕೀಯ ವಿರೋಧ ಪಕ್ಷದ ಶಾಸಕರನ್ನು ಗುರಿಯಾಗಿಸಿದ್ದರೆ ಶಾಂತವಿರಲ್ಲ: ಆರ್. ಅಶೋಕ್ ಎಚ್ಚರಿಕೆ

ವಿರೋಧ ಪಕ್ಷದ ಶಾಸಕರನ್ನು ಗುರಿಯಾಗಿಸಿದ್ದರೆ ಶಾಂತವಿರಲ್ಲ: ಆರ್. ಅಶೋಕ್ ಎಚ್ಚರಿಕೆ

0

ಬೆಂಗಳೂರು: ದ್ವೇಷ ರಾಜಕಾರಣ ಮಾಡಿ ವಿರೋಧ ಪಕ್ಷದ ಶಾಸಕರನ್ನು ಟಾರ್ಗೆಟ್‌ ಮಾಡಿದರೆ ಅದನ್ನ ನಾವು ಒಪ್ಪುವುದಿಲ್ಲ. ಸರ್ಕಾರದ ವಿರುದ್ಧ ಈ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರಕ್ಕೆ ವಾರ್ನಿಂಗ್‌ ಕೊಟ್ಟಿದ್ದಾರೆ.

ಭ್ರಮೆಯಿಂದ ಕಾಂಗ್ರೆಸ್‌‍ ಸರ್ಕಾರ ಹೊರಬರಬೇಕು
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್‌ ಅವರಿಗೆ ಪೊಲೀಸ್‌ ನೋಟೀಸ್‌ ಕೊಟ್ಟಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್  ಖಾತೆನಲ್ಲಿ ಪೋಸ್ಟ್‌ ಮಾಡಿರುವ ಅವರು, ಸುಳ್ಳು ಕೇಸುಗಳನ್ನು ಹಾಕಿಸುವ ಮುಖಾಂತರ ಬಿಜೆಪಿ ಶಾಸಕರಿಗೆ ಬೆದರಿಕೆ ಹಾಕಿ ಸುಮ್ಮನಾಗಿಸಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ. ಆದರೆ ಈ ಭ್ರಮೆಯಿಂದ ಸರ್ಕಾರ ಹೊರಗೆ ಬಂದರೆ ಬಹಳ ಉತ್ತಮ. ನಾವು ಯಾವುದೇ ಅಪರಾಧಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುವುದು. ಬಿಜೆಪಿಯಲ್ಲಿ ಅವೆಲ್ಲಾ ನಡೆಯಲ್ಲ. ಯಾವುದೇ ಶಾಸಕರ ಮೇಲೆ ಆರೋಪ ಇದ್ದರೆ ಅದರ ಬಗ್ಗೆ ಕಾನೂನಾತ್ಮಕವಾಗಿ ತನಿಖೆ ಮಾಡಬೇಕು. ಆರೋಪವನ್ನ ನ್ಯಾಯಾಲಯದಲ್ಲಿ ಸಾಬೀತು ಮಾಡಬೇಕು ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ರಾಜಕೀಯ ದ್ವೇಷ ಸಾಧಿಸುತ್ತಿದೆ
ಇನ್ನು ಕಾಂಗ್ರೆಸ್‌ ಸರ್ಕಾರ ಈ ರೀತಿ ಮಾಡುವ ಮೂಲಕ ವಿರೋಧ ಪಕ್ಷದ ಶಾಸಕರ ಧ್ವನಿಯನ್ನ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ. ಅಲ್ಲದೇ, ಬಿಕ್ಲು ಶಿವ ಅವರ ತಾಯಿ ವಿಜಯಲಕ್ಷೀ ಅವರು ನಾನು ಬೈರತಿ ಬಸವರಾಜ್‌ ವಿರುದ್ಧ ದೂರು ಕೊಟ್ಟಿಲ್ಲ, ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ ಎಂದು ಹೇಳುವುದರಲ್ಲಿಯೇ ಕಾಂಗ್ರೆಸ್‌ ರಾಜಕೀಯ ದ್ವೇಷ ಸಾಧನೆ ಮಾಡುತ್ತಿರುವುದು ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.