ಮನೆ ಅಪರಾಧ ಹಾವೇರಿಯಲ್ಲಿ ನೈತಿಕಪೊಲೀಸ್‌ ಗಿರಿ: 7 ಮಂದಿ ಬಂಧನ

ಹಾವೇರಿಯಲ್ಲಿ ನೈತಿಕಪೊಲೀಸ್‌ ಗಿರಿ: 7 ಮಂದಿ ಬಂಧನ

0

ಹಾವೇರಿ: ಹಿಂದೂ ಯುವಕನ ಜೊತೆ ಮಾತನಾಡುತ್ತಾ ನಿಂತಿದ್ದಕ್ಕೆ ಮುಸ್ಲಿಂ ಯುವತಿಯ ಮೇಲೆ ಮುಸ್ಲಿಂ ಯುವಕರ ಗ್ಯಾಂಗ್ ಹಲ್ಲೆ ನಡೆಸಿದ್ದು, ಸಂತ್ರಸ್ತ ದೂರಿನ ಆಧಾರದ ಮೇಲೆ 9 ಮುಸ್ಲಿಂ ಯುವಕರ ಪೈಕಿ 7 ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಬ್ದುಲ್ ಖಾದರ್, ಮನ್ಸೂರ್, ಮೆಹಬೂಬ್ ಖಾನ್, ರಿಯಾಜ್, ಅಲ್ಪಾಜ್, ಅಬ್ದುಲ್, ಖಾದರ್, ಸಲೀಂಸಾಬ್, ಮೆಹಬೂಬ್ ಅಲಿ ಬಂಧಿತರು.

ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅನ್ಯಕೋಮಿನ ಯುವಕ, ಯುವತಿ ಮೇಲೆ ಹಲ್ಲೆ ನಡೆದಿದೆ. 9 ಮುಸ್ಲಿಂ ಯುವಕರ ಗ್ಯಾಂಗ್‌ನಿಂದ ನೈತಿಕಪೊಲೀಸ್‌ ಗಿರಿ ನಡೆದಿದೆ. 7 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಮುಸ್ಲಿಂ ಯುವತಿ, ಹಿಂದೂ ಯುವಕನ ಜೊತೆ ನಗರದ ಶಿವನ ದೇವಸ್ಥಾನದ ಹತ್ತಿರ ಮಾತನಾಡುತ್ತ ನಿಂತಿದ್ದನ್ನು ಕಂಡ 9 ಜನರ ಗ್ಯಾಂಗ್ ಏಕಾ ಏಕಿ ದಾಳಿ ನಡೆಸಿ ಯುವತಿಯನ್ನು ಎಳೆದಾಡಿ ಯುವಕ ಮತ್ತು ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಯುವತಿ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಹಿಂದಿನ ಲೇಖನ‘ಬಡೆ ಮಿಯಾನ್  ಛೋಟೆ ಮಿಯಾನ್ʼ  ಸಿನಿಮಾದ ಫಸ್ಟ್‌ ಲುಕ್‌ ಫೋಸ್ಟರ್‌ ರಿಲೀಸ್‌
ಮುಂದಿನ ಲೇಖನವರ್ಗಾವಣೆಗಳಲ್ಲಿ ಪಾರದರ್ಶಕತೆ ತರಲು ಕ್ರಮ: ಪಿಡಿಒ ಇತರ ನೌಕರರ ಕೌನ್ಸೆಲಿಂಗ್‌ ಮಾದರಿ ವರ್ಗಾವಣೆಗೆ ಸಿದ್ಧತೆ-  ಪ್ರಿಯಾಂಕ್‌ ಖರ್ಗೆ