ಮನೆ ಅಪರಾಧ ಮೈಕ್ರೋ ಫೈನಾನ್ಸ್‌ ಕಿರುಕುಳ ಆರೋಪ – ಗೃಹಿಣಿಯೊಬ್ಬರು ಆತ್ಮಹತ್ಯೆ

ಮೈಕ್ರೋ ಫೈನಾನ್ಸ್‌ ಕಿರುಕುಳ ಆರೋಪ – ಗೃಹಿಣಿಯೊಬ್ಬರು ಆತ್ಮಹತ್ಯೆ

0

ಚಿತ್ರದುರ್ಗ : ತಾಲೂಕಿನ ಕವಾಡಿಗರಹಟ್ಟಿಯಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಕ್ರೋಫೈನಾನ್ಸ್‌ ಕಿರುಕುಳ ಆರೋಪ ಕೇಳಿಬಂದಿದೆ.

ಗೃಹಿಣಿ ನೇತ್ರಾ (30) ಆತ್ಮತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ನೇತ್ರಾ ಮೈಕ್ರೋ ಫೈನಾನ್ಸ್‌ನಲ್ಲಿ 50 ಸಾವಿರ ರೂ. ಸಾಲ ಪಡೆದಿದ್ದರು ಎಂದು ಕುಟುಂಬದರಿಂದ ಮಾಹಿತಿ ತಿಳಿದಿದೆ.

ಹೀಗಾಗಿ ಮೃತಳ ಸಂಬಂಧಿಕರಿಂದ ಮೈಕ್ರೋ ಫೈನಾನ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನಾ ಪ್ರಕರಣ ನಡೆದಿದೆ.