ಮನೆ ಅಪರಾಧ ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

0

ಗುಂಡ್ಲುಪೇಟೆ: ಪಟ್ಟಣದ ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ಕೆಎಸ್ ಅರ್ ಟಿಸಿ ಬಸ್ ನಿಲ್ದಾಣದ ಸಮೀಪ ಬೆಳಗಿನ ಸಮಯದಲ್ಲಿ ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಜಿಂಕೆ ರಸ್ತೆಗೆ ನುಗ್ಗಿದೆ ಈ ಸಂದರ್ಭದಲ್ಲಿ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದೆ.
ಜಿಂಕೆ ಮೃತಪಟ್ಟ ಸುದ್ದಿ ತಿಳಿದು ಸ್ಥಳಕ್ಕೆ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಿಂಕೆಯ ಮೃತದೇಹ ಪಿಎಂ ಮಾಡಲಾಗಿದೆ ಎಂದು ತಿಳಿಸಿದರು.
ಸಿಸಿ ಟಿವಿ ಪರಿಶೀಲನೆ ಮಾಡಿದರೆ ಜಿಂಕೆಗೆ ಅಪಘಾತ ಮಾಡಿ ಪರಾರಿಯಾಗಿರುವ ವಾಹನ ಹಾಗೂ ಅದರ ಚಾಲಕನನ್ನು ಕಂಡುಹಿಡಿಯಬಹುದಾಗಿದ್ದು ಆ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಾರ ನೋಡಬೇಕು.
ಬೇಸಿಗೆ ಆರಂಭವಾಗುತಿದ್ದು ಆಹಾರ ಅರಸಿ ಅಥವಾ ದಾರಿ ತಪ್ಪಿ ಕಾಡು ಪ್ರಾಣಿಗಳು ನಾಡಿನತ್ತ ಬರುತಿದ್ದು ಅದರಲ್ಲೂ ಮೃದು ಪ್ರಾಣಿ ಜಿಂಕೆಯನ್ನು ಕಂಡ ಕೂಡಲೇ ಯಾರಾದರು ಅರಣ್ಉ ಇಲಾಖೆಗೆ ಮಾಹಿತಿ ನೀಡಿದ್ದರೆ ಜಿಂಕೆ ಮೃತಪಡುತ್ತಿರಲಿಲ್ಲ ಎಂದು ಪರಿಸರ ಪ್ರೇಮಿಗಳು ಬೇಸರ ಹೊರಹಾಕಿದ್ದಾರೆ.