ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುದೀಪ್ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ದರ್ಶನ್ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆಯೂ ಒಂದಿಷ್ಟು ಮೆಲುಕು ಹಾಕಿದ್ದು, ಇದೇ ವೇಳೆ ಡಿಕೆ ಶಿವಕುಮಾರ್ ಅವರ ನಟ್ಟು ಬೋಲ್ಟು ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನಟ್ಟು ಬೋಲ್ಟು ಕಿತಾಪತಿ ಸಾಧು ಕೋಕಿಲ ಅವರದ್ದು, ಇದರಲ್ಲಿ ಡಿಕೆಶಿ ಸಾಹೇಬರದ್ದು, ಏನೂ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
ಸಾಧು ಕೋಕಿಲ ಅವರಿ ಆಮೇಲೆ ಹೇಳ್ತಾರೆ, ಎಲ್ಲಾರನ್ನೂ ಒಟ್ಟಿಗೆ ಕರೆದ್ರೆ ನಾನು ಹೇಗೆ ಮೆಂಟೇನ್ ಮಾಡ್ಲಿ? ಯಾರಿಗೆ ಸೆಕ್ಯೂರಿಟಿ ಕೊಡ್ಲಿ ಅಂತಾರೆ. ಅದನ್ನ ಮೊದಲೇ ಅವರಿಗೆ ಹೇಳ್ಬೇಕು ತಾನೆ. ಅಲ್ಲಿ ಬಂದು ಹೇಳಿದಾಗ ಸೈಲೆಂಟ್ ಆಗಿದ್ದರು. ಇದು ಸಾಧು ಅವರದ್ದೇ ಕಿತಾಪತಿ. ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಕರೆದವರು ಬಂದಿದ್ದಾರೆ. ಕೆಲವರಿಗೆ ಬರೋಕಾಗಿಲ್ಲ. ಅಷ್ಟಕ್ಕೆ ಕೆಲವರು ದೊಡ್ಡ ದೊಡ್ಡ ಮಾತುಗಳನ್ನಾಡಿದ್ರು. ಪರ್ವಾಗಿಲ್ಲ ಅಂದರು.
ಮುಂದುವರಿದು.. ಪಾಪ ಸಾಧು ಅವರದ್ದು ಇದರಲ್ಲಿ ಏನೂ ತಪ್ಪಿಲ್ಲ. ಅವರು ತಮಾಷೆ ಮಾಡಿಕೊಂಡೇ ಇರ್ತಾರೆ. ಇದನ್ನೂ ತಮಾಷೆಯಾಗೇ ಹೇಳಿದ್ದಾರೆ. ಆದ್ರೆ ಸೀರಿಯಸ್ ಆಗಿಬಿಡ್ತು ಅಷ್ಟೇ ಅಂತ ಹೇಳಿದರು.
ಬೆಂಗಳೂರಲ್ಲೇ ಸಿನಿ ಕಾರ್ಯಕ್ರಮವೊಂದರಲ್ಲಿ ಡಿಕೆಶಿ ಮಾತನಾಡುವಾಗ, ಚಿತ್ರರಂಗದಲ್ಲಿ ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ. ಇದನ್ನು ವಾರ್ನಿಂಗ್ ಅಂತಾ ಆದ್ರೂ ಅಂದುಕೊಳ್ಳಿ, ಮನವಿ ಅಂತಾ ಆದ್ರೂ ಅಂದುಕೊಳ್ಳಿ. ಥಿಯೇಟರ್‌ಗೆ ಪರ್ಮಿಷನ್ ಕೊಡಲಿಲ್ಲಾ ಅಂದ್ರೆ ಸಿನಿಮಾನೇ ರಿಲೀಸ್ ಆಗಲ್ವಲ್ಲ ಅಂತ ಹೇಳಿದ್ದರು.
ಈ ಹೇಳಿಕೆ ಸಿನಿಮಾರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು, ಇಡೀ ಚಿತ್ರರಂಗವೇ ದಂಗಾಗಿತ್ತು. ಆ ಸಮಯಕ್ಕೆ ಕೆಲವು ನಟ ನಟಿಯರು ಪ್ರತಿಕ್ರಿಯಿಸಿದ್ರು, ಕೆಲವರು ಡಿಕೆಶಿ ವಿರುದ್ಧ ಬೇಸರವನ್ನು ಹೊರಹಾಕಿದರು.















