ಮನೆ ರಾಜ್ಯ ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆಗೆ ಸರ್ಕಾರ ಚಿಂತನೆ..!

ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆಗೆ ಸರ್ಕಾರ ಚಿಂತನೆ..!

0

ಬೆಂಗಳೂರು : ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆಗೆ ಸರ್ಕಾರದ ಸಿದ್ದತೆ ನಡೆಸಿದೆ ಎನ್ನಲಾಗಿದೆ. ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿ ಆಗಿಸಿ, 5 ಪಾಲಿಕೆಯಾಗಿ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಕನ್ನಡ ಪದಕ್ಕೆ ಒತ್ತು ನೀಡಿ ಗ್ರೇಟರ್ ಎಂಬ ಪದ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು ಅಥಾರಿಟಿ ಉಳಿಸಿಕೊಂಡು ಗ್ರೇಟರ್ ಬದಲಾವಣೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಗ್ರೇಟರ್ ಬದಲಿಗೆ ಕನ್ನಡದ ಸೂಕ್ತ ಪದ ಬಳಕೆಗೆ ಬರುವಂತೆ ಹೆಸರು ಸೂಚಿಸಲು ಅಧಿಕಾರಿಗಳಿಗೆ ಮೌಕಿಕ ಸೂಚನೆ ನೀಡಲಾಗಿದೆ.

ಗ್ರೇಟರ್‌ ಪದ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಈ ಪದಕ್ಕೆ ಪರ್ಯಾಯವಾಗಿ ಬೇರೆ ಯಾವುದೇ ಪದ ಸಿಕ್ಕಿಲ್ಲವೇ ಎಂದು ಜನರು ಪ್ರಶ್ನಿಸಿದ್ದಾರೆ.