ಮನೆ ಸುದ್ದಿ ಜಾಲ ದ್ವಿತೀಯ ಪಿಯುಸಿ ಆಂಗ್ಲಭಾಷೆ ಕೈಪಿಡಿ ಬಿಡುಗಡೆ

ದ್ವಿತೀಯ ಪಿಯುಸಿ ಆಂಗ್ಲಭಾಷೆ ಕೈಪಿಡಿ ಬಿಡುಗಡೆ

0

ಕೊಳ್ಳೇಗಾಲ: ಪದವಿ ಪೂರ್ವ ಶಿಕ್ಷಣ ಇಲಾಖೆ, ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಆಂಗ್ಲಭಾಷೆ ವೇದಿಕೆ, ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಆಂಗ್ಲಭಾಷೆ ಕೈಪಿಡಿ ಬಿಡುಗಡೆ ಮಾಡಲಾಯಿತು.

 ಪ್ರಾಸ್ತವಿಕ ನುಡಿಗಳನ್ನಾಡಿದ ಅಲೆಗ್ಸಾಂಡರ್‌,  ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲೀಷ್ ಭಾಷೆ ಒಂದು ಕಬ್ಬಿಣದ ಕಡಲೆಯಾಗಿದ್ದು ಅವರಿಗೆ ಸುಲಭವಾಗಲೆಂದು ನಮ್ಮ ಜಿಲ್ಲೆಯ ಉಪನಿರ್ದೇಶಕರ ಕ್ರಿಯಾಶಿಲತೆ ಹಾಗೂ ಕಾರ್ಯತತ್ಪರತೆಯಿಂದ ತಾಲ್ಲೂಕುವಾರು ಉಪನ್ಯಾಸಕರನ್ನು ಕೈಪಿಡಿ ರಚನೆಗೆ ಸಂಯೋಜನೆ ಮೂರು ಹಂತಗಳಲ್ಲಿ ಸಭೆ ಸಮಾಲೋಚನೆಗಳನ್ನು ನಡೆಸಿ ಈ ದಿನ ಜಿಲ್ಲೆಯಲ್ಲಿ ೭೦೦೦ ವಿದ್ಯಾರ್ತಿಗಳಿಗೆ ಇಂಗ್ಲೀಷ್ ಕೈಪಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ಶೈಕ್ಷಣಿಕ ಸೇವಾ ಕ್ಷೇತ್ರದಲ್ಲಿ ನಿರಂತರವಾಗಿ ಚಲನಶೀಲ ವ್ಯಕ್ತಿಯಾಗಿರುವ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಎಸ್.ದತ್ತೇಶ್ ಕುಮಾರ್ ರವರ ಸಹಕಾರವನ್ನು ಶ್ಲಾಘಿಸಿದರು.

ನಮ್ಮ ಜಿಲ್ಲೆಯಲ್ಲಿ ಬಿಡುಗಡೆ ಮಾಡಲಾಗುತ್ತಿರುವ ಕೈಪಿಡಿಗೆ ENHANCE ಎಂದು ಹೆಸರಿಡಲಾಗಿದೆ. ಸ್ವಕಲಿಕೆಗೆ ಈ ಪುಸ್ತಕ ಪೂರಕವಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳನ್ನು ಗಳಿಸಲು ಪುಸ್ತಕವು ತಳಹದಿಯಾಗಿದೆ. ಆಂಗ್ಲಭಾಷಾ ಪ್ರರ್ಶನೆ ಪತ್ರಕೆಯಲ್ಲಿ ಅನೇಕ ಪ್ರರ್ಶನೆಗಳಿಗೆ ಉತ್ತರಗಳು ಪ್ರಶ್ನೆ ಪತ್ರಕೆಯಲ್ಲೇ ಇರುತ್ತದೆ. ಅದಕ್ಕೆ ಪ್ರಮುಖ ಮಾದರಿ ನಮ್ಮ ಚಾಮರಾಜನಗರ ಜಿಲ್ಲೆ ಹೊರ ತಂದಿರುವ ಆಂಗ್ಲಭಾಷಾ ಕೈಪಿಡಿಯಾಗಿದೆ ಎಂದರು.

ಹಿಂದಿನ ಲೇಖನಬೇಕರಿ ಮಾಲೀಕನ ಕಿಡ್ನಾಪ್: ಆರೋಪಿಗಳ ಬಂಧನ
ಮುಂದಿನ ಲೇಖನಸರಳವಾಗಿ ನಡೆದ ಗೋಣಹಳ್ಳಿ ಶ್ರೀ ಮಾರಮ್ಮ ರಥೋತ್ಸವ