ಬಾಲಿವುಡ್ ಸ್ಟಾರ್‌ಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಕತ್ರಿನಾ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಮಗು ಅಕ್ಟೋಬರ್-ನವೆಂಬರ್‌ನಲ್ಲಿ ಜನಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕತ್ರಿನಾ ಗರ್ಭಧಾರಣೆಯ ಬಗ್ಗೆ ಹಲವು ತಿಂಗಳುಗಳಿಂದ ಊಹಾಪೋಹಗಳು ಹರಡುತ್ತಿದ್ದವು. ಆದರೆ, ದಂಪತಿ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬ್ಯಾಡ್ ನ್ಯೂಜ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕತ್ರಿನಾ ಕೈಫ್ ಗರ್ಭಧಾರಣೆಯ ವದಂತಿಯ ಬಗ್ಗೆ ವಿಕ್ಕಿ ಕೌಶಲ್ ಅವರನ್ನು ಪ್ರಶ್ನಿಸಲಾಯಿತು. ಈ ಬಗ್ಗೆ ಒಳ್ಳೆಯ ಸುದ್ದಿ ಬಂದರೆ, ನಾವು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷಪಡುತ್ತೇವೆ.
ಊಹಾಪೋಹಗಳಲ್ಲಿ ಯಾವುದೇ ಸತ್ಯವಿಲ್ಲ. ಅಲ್ಲಿಯವರೆಗೆ ಬ್ಯಾಡ್ ನ್ಯೂಜ್ ಚಿತ್ರವನ್ನು ಆನಂದಿಸಿ, ನಾವು ಒಳ್ಳೆಯ ಸುದ್ದಿಯೊಂದಿಗೆ ಖಂಡಿತ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದ್ದಾರೆ.















