ಮನೆ ಅಪರಾಧ ಟ್ರಕ್-ಜೀಪ್ ನಡುವೆ ಅಪಘಾತ: ಏಳು ಮಂದಿ ಸಾವು

ಟ್ರಕ್-ಜೀಪ್ ನಡುವೆ ಅಪಘಾತ: ಏಳು ಮಂದಿ ಸಾವು

0

ಅಹಮದಾಬಾದ್‌: ಟ್ರಕ್ ಹಾಗೂ ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌’ನ ಪಟಾನ್‌ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಸಂಜುಭಾಯ್ ಫುಲ್ವಾಡಿ (50), ದೂದಾಭಾಯಿ ರಾಥೋಡ್ (50), ರಾಧಾಬೆನ್ ಪರ್ಮಾರ್ (35), ಕಾಜಲ್ ಪರ್ಮಾರ್ (59), ಸೀಮಾಬೆನ್ ಮಿಥುನ್‌ಭಾಯ್ ವಂಜಾರಾ (24) ಅಮೃತಾ ವಂಜಾರಾ (15), ಪಿನಾಲ್ಬೆನ್ ವಂಜಾರಾ (7) ಎಂದು ಗುರುತಿಸಲಾಗಿದೆ.

ರಾಧನ್‌’ಪುರ ಬಳಿ ಮಹೀಂದ್ರಾ ಜೀಪ್‌’ನಲ್ಲಿ ಸುಮಾರು 15 ಮಂದಿ ಪ್ರಯಾಣಿಸುತ್ತಿದ್ದರು. ಜೀಪ್‌’ನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಜೀಪ್‌ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಟ್ರಕ್‌’ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಹಿಂದಿನ ಲೇಖನಬಿಸಿ ಬಿಸಿ ಚಿಕನ್ ಸೂಪ್ ಸೇವಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ!
ಮುಂದಿನ ಲೇಖನಗಿಫ್ಟ್ ವೋಚರ್ ನೀಡಿಕೆ, ಪೂರೈಕೆಗೆ ಸರಕು ಮತ್ತು ಸೇವಾ ತೆರಿಗೆ ಅನ್ವಯಿಸದು: ಕರ್ನಾಟಕ ಹೈಕೋರ್ಟ್