ಮನೆ ರಾಜ್ಯ ಜಂಬೂಸವಾರಿ ವೀಕ್ಷಣೆ ವೇಳೆ ನೂಕುನುಗ್ಗಲು – ಯುವತಿ ಅಸ್ವಸ್ಥ…!

ಜಂಬೂಸವಾರಿ ವೀಕ್ಷಣೆ ವೇಳೆ ನೂಕುನುಗ್ಗಲು – ಯುವತಿ ಅಸ್ವಸ್ಥ…!

0

ಮೈಸೂರು : ವಿಶ್ವವಿಖ್ಯಾತ ದಸರಾ ಜಂಬೂಸವಾರಿ ವೀಕ್ಷಣೆ ವೇಳೆ ನೂಕುನುಗ್ಗಲು ಉಂಟಾಗಿ ಯುವತಿ ಅಸ್ವಸ್ಥಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಂಬೂಸವಾರಿ ಕೆಆರ್ ಆಸ್ಪತ್ರೆ ಬಳಿ ತಲುಪುತ್ತಿದ್ದಂತೆ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿ ಯುವತಿ ಅಸ್ವಸ್ಥಗೊಂಡಿದ್ದಾಳೆ.

ಕೂಡಲೇ ಅಸ್ವಸ್ಥಗೊಂಡ ಯುವತಿಯನ್ನು ಬ್ಯಾರಿಕೇಡ್‌ನಿಂದ ಆಚೆ ತಂದ ಪೊಲೀಸರು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.