ಪಾಕಿಸ್ತಾನ ಭಾರತದ ವಿರುದ್ಧ ಒಂದಲ್ಲ ಒಂದು ಹೇಳಿಕೆ ನೀಡುತ್ತ ಬಂದಿದೆ. ಅದರೆ ಇಲ್ಲಿಯವರೆಗೆ ನೀಡಿದ ಹೇಳಿಕೆಯಂತೆ ಪಾಕ್ ನಡೆದುಕೊಂಡಿಲ್ಲ. ಈ ಹಿಂದೆ ಭಾರತವನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧವು ಕಿಡಿಕಾರಿದೆ. ಯಾವಾಗ ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಭಾರತಕ್ಕೆ ಬಂದ್ರು ಅಲ್ಲಿಂದ ಪಾಕಿಸ್ತಾನಕ್ಕೆ ಉರಿ ಶುರುವಾಗಿದೆ.
ಇದೀಗ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ. ಅಗತ್ಯವಿದ್ದರೆ ಇಸ್ಲಾಮಾಬಾದ್ ಎರಡು ಕಡೆ ಯುದ್ಧ ಮಾಡಲು ಸಿದ್ಧವಾಗಿದೆ, ಒಂದು ತಾಲಿಬಾನ್ ವಿರುದ್ಧ ಮತ್ತು ಇನ್ನೊಂದು ಭಾರತದ ವಿರುದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ಎರಡು ಕಡೆ ಯುದ್ಧಕ್ಕೆ ಸಿದ್ಧವಾಗಿದೆ, ಭಾರತ ಗಡಿಯಲ್ಲಿ “ಕೊಳಕು ಆಟವಾಡುವ” ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಮಾಧ್ಯಮ ಈ ಬಗ್ಗೆ ಅವರನ್ನು ಪ್ರಶ್ನೆ ಮಾಡಿದೆ. ಭಾರತ ಗಡಿಯಲ್ಲಿ ಯಾವೆಲ್ಲ ಚಟುವಟಿಕೆಯನ್ನು ಮಾಡುತ್ತಿದೆ ಎಂದು ಕೇಳಿದ್ದರೆ, ಆದರೆ ಅದಕ್ಕೆ ಪಾಕ್ ರಕ್ಷಣಾ ಸಚಿವನ ಉತ್ತರ ಇಲ್ಲ. ಈ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ, ತಂತ್ರಗಳು ಈಗಾಗಲೇ ಜಾರಿಯಲ್ಲಿವೆ ಎಂದು ಹೇಳಿದ್ದಾರೆ.















