ವಿಜಯಪುರ : ಜಿಲ್ಲೆಯ ಸಿಂದಗಿ ಬೈಪಾಸ್ ಬಳಿ ಸಿಂದಗಿ ಶಾಸಕ ಅಶೋಕ್ ಮನಗೂಳಿ ಅವರ ಕಾರಿಗೆ ವಾಹನವೊಂದು ಡಿಕ್ಕಿಹೊಡೆದಿದೆ.
ಶಾಸಕರ ಕಾರಿನಲ್ಲಿ ಅವರ ಪುತ್ರಿ, ಸಹೋದರನ ಮಗ ಪ್ರಯಾಣಿಸುತ್ತಿದ್ದರು. ಈ ವೇಳೆ KA 03 NT 2827 ನಂಬರ್ನ ವಿಧಾನಸೌಧ ಪಾಸ್ ಹೊಂದಿರುವ ಇನ್ನೋವಾ ಹೈಕ್ರಾಸ್ ಕಾರಿಗೆ ಹಾಗೂ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಕಲಬುಗಿಯಿಂದ ಸಿಂದಗಿ ಕಡೆಗೆ ಬರ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.














