ಮನೆ ದೇಶ ಕೋವಿಡ್‌ : ದೇಶದಲ್ಲಿ 11,739 ಪ್ರಕರಣ

ಕೋವಿಡ್‌ : ದೇಶದಲ್ಲಿ 11,739 ಪ್ರಕರಣ

0

ನವದೆಹಲಿ (New Delhi): ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 11,739 ಕೋವಿಡ್ ಪ್ರಕರಣಗಳು ವರದಿಯಾಗಿದೆ. 25 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,33,89,973ಕ್ಕೆ ಏರಿಕೆಯಾಗಿದೆ. ಆ ಪೈಕಿ 5,24,999 ಮಂದಿ ಸಾವಿಗೀಡಾಗಿದ್ದಾರೆ.

ಇದುವರೆಗೆ 4,27,72,398 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 92,576 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ 2.59 ರಷ್ಟಿದೆ.

ಮಹಾರಾಷ್ಟ್ರದಲ್ಲಿ 24,333, ಕೇರಳದಲ್ಲಿ 27,891, ತಮಿಳುನಾಡಿನಲ್ಲಿ 6,677, ಕರ್ನಾಟಕದಲ್ಲಿ 4,822, ದೆಹಲಿಯಲ್ಲಿ 4,717, ತೆಲಂಗಾಣದಲ್ಲಿ 3,613, ಉತ್ತರ ಪ್ರದೇಶದಲ್ಲಿ 3,607, ಹರಿಯಾಣದಲ್ಲಿ 3,125 ಸಕ್ರಿಯ ಪ್ರಕರಣಗಳಿವೆ.

ದೇಶದಾದ್ಯಂತ ಒಟ್ಟು 197.08 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.