ಮನೆ ಮನರಂಜನೆ ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ – 3 ಶೂಟ್‌ ಅರಂಭ

0

ಮುಂಬಯಿ: ಹಿಂದಿ ವೆಬ್‌ ಸರಣಿಯಲ್ಲಿ ಅಪಾರ ಮೆಚ್ಚಿಗೆ ಪಡೆದ ಶೋಗಳಲ್ಲಿ ಒಂದಾಗಿರುವ ʼದಿ ಫ್ಯಾಮಿಲಿ ಮ್ಯಾನ್‌ʼ ಸೀಸನ್‌ -3 ಬಗ್ಗೆ ಬಿಗ್‌ ಅಪ್ಡೇಟ್‌ ವೊಂದು ಹೊರಬಿದ್ದಿದೆ.

Join Our Whatsapp Group

ಮನೋಜ್ ಬಾಜಪೇಯಿ ಪ್ರಮುಖ ಪಾತ್ರದಲ್ಲಿರುವ ʼದಿ ಫ್ಯಾಮಿಲಿ ಮ್ಯಾನ್‌ʼ ವೆಬ್‌ ಸರಣಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈ ಸರಣಿಗೆ ಪ್ರತ್ಯೇಕ ನೋಡುಗರ ವರ್ಗವೇ ಇದೆ. ʼಫ್ಯಾಮಿಲಿ ಮ್ಯಾನ್‌ʼ ಸೀಸನ್‌ -2  ನೋಡಿದ ಬಳಿಕ ಪ್ರೇಕ್ಷಕರ ಕುತೂಹಲ ಹೆಚ್ಚಾಗಿತ್ತು. ಮನೋಜ್‌ ಅಭಿನಯ ಸರಣಿಯಲ್ಲಿ ಮತ್ತೊಮ್ಮೆ ಮೋಡಿ ಮಾಡಿತ್ತು.

ರಾಜ್ & ಡಿಕೆ ರಚಿಸಿ, ನಿರ್ದೇಶಿಸಿದ್ದು, ಸುಮನ್ ಕುಮಾರ್ ಬರೆದಿರುವ ʼಫ್ಯಾಮಿಲಿ ಮ್ಯಾನ್‌ʼ ಸೀಸನ್‌ -3 ಬಗ್ಗೆ ಬಿಗ್‌ ಅಪ್ಡೇಟ್‌ ಹೊರಬಿದ್ದಿದೆ.

ಮೂರನೇ ಸೀಸನ್‌ ಚಿತ್ರೀಕರಣ ಆರಂಭಗೊಂಡಿದ್ದು,  ಈ ಖುಷಿಯ ವಿಚಾರವನ್ನು ತಂಡ ಹಂಚಿಕೊಂಡಿದೆ.

ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅಮೆಜಾನ್ ಪ್ರೈಮ್ ಹಂಚಿಕೊಂಡ ಚಿತ್ರದಲ್ಲಿ ಕ್ಲಾಪ್‌ಬೋರ್ಡ್‌ನ ಚಿತ್ರವಿದ್ದು, ರಾಜ್ ಮತ್ತು ಡಿಕೆ ಜೊತೆ ಮನೋಜ್ ಬಾಜಪೇಯಿ ಪೋಸ್ ನೀಡಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ʼದಿ ಫ್ಯಾಮಿಲಿ ಮ್ಯಾನ್‌ʼ ನಲ್ಲಿ ಮತ್ತೊಮ್ಮೆ ಮನೋಜ್ ಬಾಜಪೇಯಿ ಮಧ್ಯಮ ವರ್ಗದ ವ್ಯಕ್ತಿಯಾಗಿ, ಗೂಢಚಾರಿಯಾಗಿರುವ ಶ್ರೀಕಾಂತ್ ತಿವಾರಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಕಡೆ ಕುಟುಂಬ ಇನ್ನೊಂದೆಡೆ ದೇಶವನ್ನು ರಕ್ಷಿಸುವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಮೂರನೇ ಸೀಸನ್‌ ನಲ್ಲಿ ಪ್ರಿಯಾಮಣಿ (ಸುಚಿತ್ರಾ ತಿವಾರಿ), ಶರೀಬ್ ಹಶ್ಮಿ (ಜೆಕೆ ತಲ್ಪಾಡೆ), ಆಶ್ಲೇಷಾ ಠಾಕೂರ್ (ಧೃತಿ ತಿವಾರಿ), ವೇದಾಂತ್ ಸಿನ್ಹಾ (ಅಥರ್ವ್ ತಿವಾರಿ) ಸೇರಿದಂತೆ ಇತರರು ಕಾಣಿಸಿಕೊಳ್ಳಲಿದ್ದಾರೆ.

ಹಿಂದಿನ ಲೇಖನಪತಿ ಹೂಡಿದ ವೈವಾಹಿಕ ದಾವೆ ವೆಚ್ಚಗಳನ್ನು ಆರಂಭದಲ್ಲಿಯೇ ನ್ಯಾಯಾಲಯಗಳು ಪತ್ನಿಗೆ ಕೊಡಿಸಬೇಕು: ಕಲ್ಕತ್ತಾ ಹೈಕೋರ್ಟ್
ಮುಂದಿನ ಲೇಖನಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ ವ್ಯಕ್ತಿ ಸಾವು