Facebook Instagram Share X Youtube
  • ಸುದ್ದಿ ಜಾಲ
    • ಅಂತರಾಷ್ಟ್ರೀಯ
    • ಕೃಷಿ
    • ತಂತ್ರಜ್ಞಾನ
    • ದೇವಸ್ಥಾನ
    • ದೇಶ
  • ವೀಡಿಯೋಗಳು
  • ರಾಜಕೀಯ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಹುಡುಕಾಟ
Wednesday, June 10, 2026
  • About Us
  • Contact us
Facebook Instagram Share X Youtube
Saval News
  • ಸುದ್ದಿ ಜಾಲ
    • ಬಂಡೀಪುರ  : ರೌಡಿ ಶೀಟರ್ ಎಣ್ಣೆ ಪಾರ್ಟಿ ಪ್ರಕರಣ ಆರ್‌ಎಫ್‌ಒ ಪುನೀತ್ ಕುಮಾರ್‌ ಅಮಾನತು
      ನವದೆಹಲಿ : ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ
      ಮಂಡ್ಯ : ಒಂದೇ ಕುಟುಂಬದ ಮೂವರು ನಿಗೂಢ ಸಾವು
      ಯುವ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಬಂಧನ : ಹನಿಟ್ರ್ಯಾಪ್  ₹2.77 ಕೋಟಿ ಲೂಟಿ
      ಮೈಸೂರು : ನಗರ ವ್ಯಾಪ್ತಿಯಲ್ಲಿ 458 ಕೋಟಿ, ರೂ. ದಂಡ ವಸೂಲಿ ಬಾಕಿ
      ಎಲ್ಲಾಅಂತರಾಷ್ಟ್ರೀಯಕೃಷಿತಂತ್ರಜ್ಞಾನದೇವಸ್ಥಾನದೇಶ
  • ವೀಡಿಯೋಗಳು
    • ಬಾವಿಗೆ ಹಾರಿದ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ : ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಗದರಿದ ಪೋಷಕರು
      ​ವೃದ್ಧನೊಬ್ಬ ಸಚಿವೆ ನಿರ್ಮಲಾ ಸೀತಾರಾಮನ್ ಫೇಕ್ ವಿಡಿಯೋ ನಂಬಿ 7.9 ಲಕ್ಷ ಹಣ ಕಳೆದು ಕೊಂಡಿದ್ದಾರೆ : ಬೆಳಗಾವಿಯ
      ಯುವತಿ ಸ್ನಾನ ಮಾಡುತ್ತಿದಾಗ ಕದ್ದು ವಿಡಿಯೋ ಚಿತ್ರೀಕರಣ : ಆರೋಪಿ ಯುವಕನಿಗೆ ಹುಡುಕಾಟ
      ಚುನಾವಣಾ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಕಾಲಾವಕಾಶ
      ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು
  • ರಾಜಕೀಯ
    • ನವದೆಹಲಿ : ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ
      ಯುವ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರ ಬಂಧನ : ಹನಿಟ್ರ್ಯಾಪ್  ₹2.77 ಕೋಟಿ ಲೂಟಿ
      ಜಮೀರ್ ಪರ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು : ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸಂಕಷ್ಟ
      12 ವರ್ಷಗಳ ಸುದೀರ್ಘ ಅಧಿಕಾರಾವಧಿ : ಪ್ರಧಾನಿ ಮೋದಿ
      ಆಯುಷ್ಮಾನ್ ಭಾರತ್ ಫಲಾನುಭವಿಗಳಿಂದ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ: ಸಚಿವ ಯು.ಟಿ. ಖಾದರ್ ಎಚ್ಚರಿಕೆ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಮನೆ ರಾಜ್ಯ ಮಾಲೂರು ಮರು ಮತ ಎಣಿಕೆ ಮುಕ್ತಾಯ – ಫಲಿತಾಂಶ ಗೌಪ್ಯ, ಸುಪ್ರೀಂಗೆ ವರದಿ ಸಲ್ಲಿಕೆ..!
  • ರಾಜ್ಯ
  • ರಾಷ್ಟ್ರೀಯ
  • ಸುದ್ದಿ ಜಾಲ

ಮಾಲೂರು ಮರು ಮತ ಎಣಿಕೆ ಮುಕ್ತಾಯ – ಫಲಿತಾಂಶ ಗೌಪ್ಯ, ಸುಪ್ರೀಂಗೆ ವರದಿ ಸಲ್ಲಿಕೆ..!

November 12, 2025
0
Share
WhatsApp
Telegram
Facebook
X
Email

    ಕೋಲಾರ : ಇಡೀ ದೇಶದ ಗಮನ ಸೆಳೆದಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ಸಾಕಷ್ಟು ಕುತೂಹಲಗಳ ನಡುವೆ ಮುಗಿದಿದ್ದು, ಸತತವಾಗಿ ಹನ್ನೆರಡು ಗಂಟೆಗಳ ಕಾಲ ನಡೆದ ಮರು ಎಣಿಕೆ ಕಾರ್ಯದಲ್ಲಿ ಅಭ್ಯರ್ಥಿಗಳಿಗೆ ಇದ್ದ ಗೊಂದಲವನ್ನು ಬಹುತೇಕ ನಿವಾರಣೆ ಮಾಡಲಾಗಿದೆ. ಕಳೆದ ಫಲಿತಾಂಶವೇ ಯತಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ.

    ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಮತ ಎಣಿಕೆ ಕೋರಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ಎರಡೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ಮರು ಎಣಿಕೆಗೆ ಆದೇಶ ಮಾಡಿ ನಂತರ ಹಾಲಿ ಶಾಸಕರನ್ನು ಅಸಿಂಧು ಮಾಡಿತ್ತು. ಅಸಿಂಧು ಅದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಶಾಸಕ ನಂಜೇಗೌಡ ಅವರಿಗೆ ಅಸಿಂಧು ಆದೇಶ ತಡೆಯಾಜ್ಞೆ ನೀಡಿ ಮರು ಎಣೆಕೆಗೆ ಆದೇಶಿಸಿತ್ತು.

    ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ಮರು ಎಣಿಕೆ ಕಾರ್ಯ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮರು ಎಣಿಕೆ ಕಾರ್ಯ ಸತತವಾಗಿ ರಾತ್ರಿ 8 ಗಂಟೆವರೆಗೆ ನಡೆಯಿತು. ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಮಾಡಿ ನಂತರ ಇವಿಎಂಗಳ ಎಣಿಕೆ ಕಾರ್ಯ ನಡೆಯಿತು. ಅಭ್ಯರ್ಥಿಗಳ ಸಮ್ಮುಖದಲ್ಲಿ ಅವರ ಎಲ್ಲಾ ಗೊಂದಲ ಅನುಮಾನಗಳನ್ನು ಪರಿಹರಿಸಿದ ನಂತರ ಎಣಿಕೆ ಕಾರ್ಯ ನಡೆಸಲಾಗುತ್ತಿತ್ತು.

    ರಾಜ್ಯ ಚುನಾವಣಾ ಆಯೋಗ ಮತ ಎಣಿಕೆ ಮೇಲೆ ಹದ್ದಿನ ಕಣ್ಣಿಟ್ಟು ಪ್ರತಿ ಸುತ್ತಿನ ಎಣಿಕೆಯ ಮಾಹಿತಿ ಪಡೆಯುತ್ತಿತ್ತು. ರಾಜ್ಯ ಚುನಾವಣಾ ಆಯೋಗದ ಸೂಚನೆ ನಂತರವೇ ಪ್ರತಿ ಸುತ್ತಿನ ಎಣಿಕೆ ಕಾರ್ಯ ಮಾಡಲಾಗಿದೆ. ಹದಿನಾಲ್ಕು ಟೇಬಲ್‌ಗಳಲ್ಲಿ ಒಟ್ಟು 18 ಸುತ್ತಿನ ಮತ ಎಣೆಕೆ ಕಾರ್ಯ ಮಾಡಿ ಮುಗಿಸಲಾಗಿದೆ. ಸದ್ಯ ಎಣಿಕೆಯ ನಂತರ ಪೋಸ್ಟಲ್ ಬ್ಯಾಲೆಟ್‌ನಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

    ಎಣಿಕೆ ನಂತರ ಪ್ರತಿಕ್ರಿಯೆ ನೀಡಿದ ಶಾಸಕ ನಂಜೇಗೌಡ, ಇಂದಿನ ಎಣಿಕೆ ಕಾರ್ಯ ಸಂತೋಷ ತಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ನ್ಯಾಯ ಸಿಕ್ಕಿದೆ. ಎರಡೂವರೆ ವರ್ಷಗಳ ಕಾಲ ನನಗಾದ ನೋವಿಗೆ ಪರಿಹಾರ ಸಿಕ್ಕಿದೆ ಎಂದರು.

    ಇನ್ನು ಮರು ಎಣಿಕೆಗಾಗಿ ಎರಡೂವರೆ ವರ್ಷಕಾಲ ನಿರಂತರವಾಗಿ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದ ಮಾಲೂರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಇಂದು ಅವರ ಸಾಕಷ್ಟು ಬೆಂಬಲಿಗರು ಹಾಗೂ ವಕೀಲರೊಂದಿಗೆ ಮರು ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಮರು ಎಣಿಕೆ ನಂತರ ಮಾಜಿ ಶಾಸಕ ಮಂಜುನಾಥಗೌಡ ಪ್ರತಿಕ್ರಿಯೆ ನೀಡಿ, ನನಗೆ ಇನ್ನೂ ಸಮಾಧಾನ ಆಗಿಲ್ಲ, ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳ ಪ್ರೊಸೀಜರ್ ಲ್ಯಾಪ್ಸ್ ಇದೆ. ಸಂಪೂರ್ಣ ವಿವಿ ಪ್ಯಾಟ್‌ಗಳನ್ನು ಎಣಿಸಬೇಕಿತ್ತು.

    ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಿದೆ. ಚುನಾವಣೆ ಮರುಎಣಿಕೆ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಹೇಳಿತ್ತು. ಆದರೆ ಕೆಲವೊಂದು ನನ್ನ ಮನವಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ. ನನ್ನ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

    ಒಟ್ಟಾರೆ ಇಡೀ ದೇಶದ ಗಮನ ಸೆಳೆದಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಿದೆ. ನವೆಂಬರ್ 24ರಂದು ಮರು ಎಣಿಕೆಯ ಫಲಿತಾಂಶ ಹೊರಬೀಳಲಿದೆ.

    • ಟ್ಯಾಗ್ಗಳು
    • concludes
    • confidential
    • Kolar
    • KY Nanjegowda
    • Malur
    • Malur recount
    • Manjunath Gowda
    • report
    • results
    • submitted
    • supreme court
    • Vote Recount
    Share
    WhatsApp
    Telegram
    Facebook
    X
    Email
      ಹಿಂದಿನ ಲೇಖನಫರಿದಾಬಾದ್‌ ಪ್ರಕರಣ;‌ ಶೋಪಿಯಾನ್‌ನಲ್ಲಿ ಮೌಲ್ವಿ ದಂಪತಿ ಅರೆಸ್ಟ್‌
      ಮುಂದಿನ ಲೇಖನಮುಂದುವರಿದ ಕಬ್ಬು ಬೆಳೆಗಾರರ ಪ್ರತಿಭಟನೆ – ರಾಷ್ಟ್ರೀಯ ಹೆದ್ದಾರಿ ಬಂದ್, ಕಾರ್ಖಾನೆಗೆ ಬೀಗ ಹಾಕುವ ಎಚ್ಚರಿಕೆ
      Saval

      ಸಂಬಂಧಿತ ಲೇಖನಗಳುಲೇಖಕರಿಂದ ಇನ್ನಷ್ಟು

      ಸುದ್ದಿ ಜಾಲ

      ಬಂಡೀಪುರ  : ರೌಡಿ ಶೀಟರ್ ಎಣ್ಣೆ ಪಾರ್ಟಿ ಪ್ರಕರಣ ಆರ್‌ಎಫ್‌ಒ ಪುನೀತ್ ಕುಮಾರ್‌ ಅಮಾನತು

      ಸುದ್ದಿ ಜಾಲ

      ನವದೆಹಲಿ : ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

      ಸುದ್ದಿ ಜಾಲ

      ಮಂಡ್ಯ : ಒಂದೇ ಕುಟುಂಬದ ಮೂವರು ನಿಗೂಢ ಸಾವು

      EDITOR PICKS

      ನನಗೆ ಬೆದರಿಕೆ ಹಾಕಬೇಡಿ: ಸಿಜೆಐ ಡಿ.ವೈ.ಚಂದ್ರಚೂಡ್‌

      Saval - March 2, 2023

      ಗಾಜಾ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 100ಕ್ಕೂ ಅಧಿಕ ಮಂದಿ ಸಾವು

      Saval - August 10, 2024

      ಸೈಕಲ್ ಬಳಸದಿದ್ದರೂ ನಿರ್ವಹಣಾ ವೆಚ್ಚ ಪಡೆಯುತ್ತಿರುವ 53 ಸಾವಿರ ಪೊಲೀಸರು: ದೆಹಲಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಕೆ

      Saval - July 15, 2022

      ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ, ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ: ವಿಜಯೇಂದ್ರಗೆ ಈಶ್ವರಪ್ಪ ತಿರುಗೇಟು

      Saval - April 8, 2024
      Saval TV on YouTube
      Suddi Samaya : ಭಾರೀ ಪ್ರಮಾಣದ  1.40 ಕೋಟಿ ಮೌಲ್ಯದ ಗಾಂಜಾ ವಶ

#drug #police #ccbpolice #cesk #sardarvallabaipatel #yaduveer #sdjgold #chinnatambi #saraswathipuram #murder #sucide #chamundibetta #history #thippayyanakere #congress #dkshivakumar #bangalore #cmvijay #narve #chess #pragnananda #boat #harmuj #india #winnig #savaltv #mysore


ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whatsapp Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Suddi Samaya : ಭಾರೀ ಪ್ರಮಾಣದ 1.40 ಕೋಟಿ ಮೌಲ್ಯದ ಗಾಂಜಾ ವಶ
      Suddi Samaya : ಪೊಲೀಸ್ ಠಾಣೆಗಳಲ್ಲಿ ರೌಡಿ ಸ್ಕ್ಯಾಡ್ ರಚನೆ

#police #rowdy #station # kcnagar #fastival #karanjilake #ecotower #zipline #canopiwalk #tanveerset #protest #mla #mysorevariers #cricket #t20 #cm #dkshivakumar #kanakapura #congress #kolar #hosakote # highway # accident #lokayukta # friendship #nepal #india #rcb # rcbfan #vaibhavsuryavamshi #savaltv #mysore


ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whatsapp Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Suddi Samaya : ಪೊಲೀಸ್ ಠಾಣೆಗಳಲ್ಲಿ ರೌಡಿ ಸ್ಕ್ಯಾಡ್ ರಚನೆ
      #WeeklyHoroscope #Horoscope2026 #Astrology #ZodiacSigns #AstrologyPredictions #Aries #Taurus #Gemini #Cancer #Leo #Virgo #Libra #Scorpio #Sagittarius #Capricorn #Aquarius #Pisces
#IndianAstrology #VedicAstrology #Spirituality #DailyHoroscope #ZodiacForecast #FarmTips #Agriculture #FarmingLife #CropCare #OrganicFarming #VastuShastra #SpiritualRemedies #PositiveEnergy #EnergyHealing #NatureHealing #savaltv 

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Vara Bhavishya | 12 ರಾಶಿಗಳ ವಾರ ಭವಿಷ್ಯ #savaltv #astrology
      Subscribe
      • Privacy
      • Contact Us
      © Savalnews.com. All rights reserved.
      Designed & developed by Crisant Technologies