ಮನೆ ಅಪರಾಧ ಕೆಎಸ್ ಆರ್ ಟಿಸಿ ಬಸ್- ಟೆಂಪೋ ಮುಖಾಮುಖಿ ಢಿಕ್ಕಿ: ಓರ್ವ ಸಾವು

ಕೆಎಸ್ ಆರ್ ಟಿಸಿ ಬಸ್- ಟೆಂಪೋ ಮುಖಾಮುಖಿ ಢಿಕ್ಕಿ: ಓರ್ವ ಸಾವು

0

ಮೈಸೂರು(Mysuru): ಕೆಎಸ್ ಆರ್ ಟಿಸಿ ಬಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಹೋಬಳಿಯ ಮಲ್ಲಿನಾಥಪುರ ಬಳಿ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಬನ್ನಿಕುಪ್ಪೆ ಗ್ರಾಮದ ನಾಗಯ್ಯ ಮೃತ ದುರ್ದೈವಿ. ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಹನಗೋಡು ಹೋಬಳಿಯ ತಟ್ಟೆಕೆರೆ ಗ್ರಾಮದ ಮಂಗಳಮ್ಮ, ಅರಸು ಕಲ್ಲಹಳ್ಳಿಯ ಶೇಖರ್, ಧರ್ಮಪುರದ ಕೆಂಡಗಣ್ಣಮ್ಮ, ಮಂಟಿಕೊಪ್ಪಲು ಜಯಮ್ಮ ಅವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿದರು. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.