ಮನೆ ರಾಜಕೀಯ ಅವರಾಗಿ ಕರೆದರೆ ಮಾತ್ರ ಹೋಗ್ತೀವಿ – ಹೈಕಮಾಂಡ್‌ ಭೇಟಿಯಾಗದೇ ಇರಲು ಡಿಕೆ ಬ್ರದರ್ಸ್‌ ನಿರ್ಧಾರ

ಅವರಾಗಿ ಕರೆದರೆ ಮಾತ್ರ ಹೋಗ್ತೀವಿ – ಹೈಕಮಾಂಡ್‌ ಭೇಟಿಯಾಗದೇ ಇರಲು ಡಿಕೆ ಬ್ರದರ್ಸ್‌ ನಿರ್ಧಾರ

0

ಬೆಂಗಳೂರು : ಅಧಿಕಾರ ಹಂಚಿಕೆ ಕಿತ್ತಾಟ ಜಾಸ್ತಿಯಾಗಿದ್ದು, Word Is Stronger Than World ಈ ನಿಲುವಿಗೆ ಬದ್ದರಾಗಿರಲು ಡಿಕೆ ಸಹೋದರರು ನಿರ್ಧಾರ ತೆಗೆದುಕೊಂಡಿದ್ದಾರೆ.

ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ಹೇಳಿದ ಎಲ್ಲಾ ಕೆಲಸ ಮಾಡಿ ಮುಗಿಸಿದ್ದೇನೆ. ಈಗಲೂ ಹೈಕಮಾಂಡ್ ಹೇಳಿದ ಮಾತಿಗೆ ನಾವು ಬದ್ಧವಾಗಿದ್ದೇನೆ. ಹೀಗಾಗಿ ಅವರಾಗಿಯೇ ಕರೆಯುವವರೆಗೆ ಯಾವುದೇ ಕಾರಣಕ್ಕೆ ಹೈಕಮಾಂಡ್‌ ನಾಯಕರನ್ನು ಭೇಟಿಯಾಗದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹೈಕಮಾಂಡ್ ಹೇಳಿದ ಎರಡೂವರೆ ವರ್ಷದ ಗಡುವು ಮುಗಿದಿದೆ. ಈಗ ನೀವು ಹೇಳಬೇಕು. ನಾನು ಕೇಳಬೇಕು. ಈ ನಿಲುವಿಗೆ ದೃಢವಾಗಿ ನಿಲ್ಲಲು ಡಿಕೆಶಿ ಮುಂದಾಗಿದ್ದಾರೆ.

100 ಕಾಂಗ್ರೆಸ್‌ ಕಟ್ಟಡ ಶಂಕುಸ್ಥಾಪನೆ ಮಾಡಲು ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಲು ಡಿಕೆಶಿ ದೆಹಲಿಗೆ ತೆರಳಿದ್ದರು. ಆದರೆ ರಾಹುಲ್‌ ಗಾಂಧಿ ಡಿಕೆಶಿ ಭೇಟಿಗೆ ಅವಕಾಶ ನೀಡಿರಲಿಲ್ಲ. ಈಗ ಒಂದು ವಾರದ ಒಳಗಡೆ ಹೈಕಮಾಂಡ್‌ ನಾಯಕರೇ ಡಿಕೆಶಿ ಭೇಟಿಗೆ ಬುಲಾವ್‌ ನೀಡುವ ಸಾಧ್ಯತೆಯಿದೆ.