ಮನೆ ರಾಜ್ಯ ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ – ಡಿಕೆಶಿ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ – ಡಿಕೆಶಿ

0

ಬೆಂಗಳೂರು : ʻಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದಲ್ಲಿ ದೊಡ್ಡ ಶಕ್ತಿʼ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಪೋಸ್ಟ್ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಟ್ ಕೊಟ್ಟಂತಿದೆ. ಇಂದು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ, `Word Power Is World Power’ ಎಂದು ಪೋಸ್ಟ್ ಹಾಕಿದ್ದಾರೆ.

ನಿನ್ನೆಯೂ ಡಿಸಿಎಂ ಡಿಕೆ ಶಿವಕುಮಾರ್ ಇದೇ ಮಾತನ್ನ ವೇದಿಕೆಯಲ್ಲಿ ಹೇಳಿದ್ದರು. ಮತ್ತೆ ಇದೇ ಪದವನ್ನು ಪೋಸ್ಟ್ ಮಾಡಿರುವುದು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೇ ಹೇಳಿದಂತಿದೆ. ಒಮ್ಮೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವುದು ಜಗತ್ತಿನ ಅತಿದೊಡ್ಡ ಶಕ್ತಿ. ನನ್ನನ್ನೂ ಸೇರಿದಂತೆ ಅದು ನ್ಯಾಯಾಧೀಶರಾಗಿರಲಿ, ರಾಷ್ಟ್ರಪತಿಯಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಎಲ್ಲರೂ ನುಡಿದಂತೆ ನಡೆಯಬೇಕು ಎಂದು ಮಾತಿನ ಚಾಟಿ ಬೀಸಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇದೇ ಶನಿವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಿಎಂ, ಡಿಸಿಎಂ ಇಬ್ಬರೂ ಸಭೆಗೆ ತೆರಳೋ ಸಾಧ್ಯತೆಯಿದ್ದು, ಇನ್ನೆರಡು ದಿನಗಳಲ್ಲಿ ಸಂಧಾನ ಸೂತ್ರ ಹೊರಬೀಳಲಿದೆ. ಅಲ್ಲದೇ ಸಿಎಂ-ಡಿಸಿಎಂ ಮುಖಾಮುಖಿ ಆಗುವುದಕ್ಕೂ ಮುನ್ನ ಹೈಕಮಾಂಡ್‌ಗೆ ಕ್ಲ್ಯಾರಿಟಿಯ ಅಗತ್ಯವಿದೆ. ಹೀಗಾಗಿ ಇಂದು ನಿರ್ಣಾಯಕ ಸಭೆ ನಡೆಸಲಿದೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.

ದೆಹಲಿಯ ಕಾಂಗ್ರೆಸ್ ಭವನದಲ್ಲಿಂದು ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ನಡೆಯಲಿದ್ದು, ಯಾರು ಸಿಎಂ ಬೇಕು ಅನ್ನೋದರ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಒಟ್ಟು ಸೇರಿ ಇಂದು ಸಭೆ ನಡೆಸಲಿದ್ದಾರೆ ಅಂತ ಹೇಳಲಾಗ್ತಿದೆ. ಇಂದಿನ ಸಭೆಯಲ್ಲಿ ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್ ನಿಲುವು ಧನಿರಬೇಕು ಎಂಬ ವಿಚಾರದಲ್ಲಿ ಒಂದು ಕ್ಲಾರಿಟಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.