ಮನೆ ರಾಷ್ಟ್ರೀಯ ಶೀಘ್ರದಲ್ಲೇ 200 ಕೋಟಿ ಕೋವಿಡ್ ಲಸಿಕೆ ಗುರಿ ತಲುಪಲಿರುವ ಭಾರತ: ಪ್ರಧಾನಿ ಮೋದಿ

ಶೀಘ್ರದಲ್ಲೇ 200 ಕೋಟಿ ಕೋವಿಡ್ ಲಸಿಕೆ ಗುರಿ ತಲುಪಲಿರುವ ಭಾರತ: ಪ್ರಧಾನಿ ಮೋದಿ

0

ನವದೆಹಲಿ (New Delhi): ಶೀಘ್ರದಲ್ಲೇ 200 ಕೋಟಿ ಕೋವಿಡ್ ಲಸಿಕೆ ಗುರಿಯನ್ನು ತಲುಪಿ ಭಾರತ ಹೊಸ ಮೈಲುಗಲ್ಲು ಸಾಧಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮನ್‌ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನತೆ ಮುನ್ನೆಚ್ಚರಿಕಾ ಡೋಸ್ ಪಡೆಯಬೇಕಾದ ಅಗತ್ಯತೆಯನ್ನು ಹಾಗೂ ಸೋಂಕಿನ ವಿರುದ್ಧ ಜನತೆ ಸಾಕಷ್ಟು ಸುರಕ್ಷತೆ ವಹಿಸಬೇಕು ಎಂದು ಕರೆ ನೀಡಿದರು.

ಈಗಾಗಲೇ 2ನೇ ಡೋಸ್ ಪಡೆದವರು ಮುನ್ನೆಚ್ಚರಿಕಾ ಡೋಸ್ ಅಥವಾ 3ನೇ ಡೋಸ್ ಪಡೆಯಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದರು. ಎಲ್ಲಕ್ಕಿಂತ ಹೆಚ್ಚಾಗಿ ವಯಸ್ಕರು ಅತ್ಯಗತ್ಯವಾಗಿ ಮುನ್ನೆಚ್ಚರಿಕಾ ಡೋಸ್ ಪಡೆಯಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಕೊರೊನಾ ಲಸಿಕೆ ಮಾತ್ರವಲ್ಲ ಕೈಗಳ ಸ್ವಚ್ಛತೆ, ಮಾಸ್ಕ್ ಧಾರಣೆ ಸೇರಿದಂತೆ ಸಕಲ ರೀತಿಯ ಕೋವಿಡ್ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಎಲ್ಲರೂ ಎಚ್ಚರಿಕೆಯಿಂದ ಇರಿ, ಎಲ್ಲರೂ ಆರೋಗ್ಯವಂತರಾಗಿರಿ ಹಾಗೂ ಧನಾತ್ಮಕ ಶಕ್ತಿಯನ್ನು ಮೈಗೂಡಿಸಿಕೊಂಡು ಎಲ್ಲರೂ ಮುನ್ನಡೆಯೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಇನ್ನು ಜೂನ್ 26ರ ಬೆಳಿಗ್ಗೆ 7 ಗಂಟೆವರೆಗಿನ ಮಾಹಿತಿ ಪ್ರಕಾರ ದೇಶಾದ್ಯಂತ 197 ಕೋಟಿಗೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಂಖ್ಯೆ 200 ಕೋಟಿಯ ಗುರಿ ದಾಟಲಿದೆ.

ಇನ್ನು, ಮಾರ್ಚ್ 16, 2022ರಿಂದ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೂ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಿದೆ. ಈವರೆಗೆ ದೇಶಾದ್ಯಂತ 3.63 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಇನ್ನು 18 ರಿಂದ 59 ವರ್ಷದ ಒಳಗಿನ ಮಂದಿಗೆ ಮುನ್ನೆಚ್ಚರಿಕಾ ಡೋಸ್ ಪಡೆದುಕೊಳ್ಳುವಂತೆ ಹೇಳಲಾಗಿದ್ದು, ಏಪ್ರಿಲ್ 10, 2022ರಿಂದ ಇದು ಜಾರಿಯಲ್ಲಿದೆ. ದೇಶಾದ್ಯಂತ ಈವರೆಗೆ 2 ಕೋಟಿಗೂ ಹೆಚ್ಚು ಮಂದಿ ಮುನ್ನೆಚ್ಚರಿಕಾ ಡೋಸ್ ಪಡೆದಿದ್ದು, ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಹಿಂದಿನ ಲೇಖನಪಕ್ಷ ತೊರೆದು ಚುನಾವಣೆ ಎದುರಿಸಿ ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು
ಮುಂದಿನ ಲೇಖನಬಿಜೆಪಿಯನ್ನು ಅಧಿಕಾರಕ್ಕೆ ತರಲು ಆರ್‌ಎಸ್‌ಎಸ್‌ ನಿಂದ ಹಣ ಸಂಗ್ರಹ: ಹೆಚ್.‌ಡಿ.ಕುಮಾರಸ್ವಾಮಿ