ಮನೆ ರಾಷ್ಟ್ರೀಯ ಎಸ್‌ಬಿಐ ಕಾರು ಸಾಲ ವಂಚನೆ ಕೇಸಲ್ಲಿ ಇಡಿ ದಾಳಿ; ಐಷಾರಾಮಿ ಕಾರುಗಳು ವಶ

ಎಸ್‌ಬಿಐ ಕಾರು ಸಾಲ ವಂಚನೆ ಕೇಸಲ್ಲಿ ಇಡಿ ದಾಳಿ; ಐಷಾರಾಮಿ ಕಾರುಗಳು ವಶ

0

ಮುಂಬೈ : ಎಸ್‌ಬಿಐ ಕಾರು ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯವು ಬಿಎಂಡಬ್ಲ್ಯು, ಮರ್ಸಿಡಿಸ್, ಲ್ಯಾಂಡ್ ರೋವರ್ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ವಾಹನ ಸಾಲ ವಂಚನೆಯ ವಿರುದ್ಧ ಪುಣೆಯಲ್ಲಿ ಜಾರಿ ನಿರ್ದೇಶನಾಲಯವು ಕಾರ್ಯಾಚರಣೆ ನಡೆಸಿತು. ಸಾಲಗಾರರು ಮತ್ತು ಕಾರು ವಿತರಕರ 12 ವಸತಿ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಸಾಲಗಾರರು ನಕಲಿ ದಾಖಲೆಗಳನ್ನು ಬಳಸಿಕೊಂಡು ಹೆಚ್ಚಿನ ಮೌಲ್ಯದ ಕಾರು ಸಾಲಗಳನ್ನು ವಂಚನೆಯಿಂದ ಪಡೆದುಕೊಂಡಿದ್ದಾರೆ. ಆ ಮೂಲಕ ಬ್ಯಾಂಕಿಗೆ ವಂಚಿಸಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.‌

ಮುಂಬೈ ವಲಯ ಕಚೇರಿಯ ಜಾರಿ ನಿರ್ದೇಶನಾಲಯ, ನ.25-26 ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002 ರ ನಿಬಂಧನೆಗಳ ಅಡಿಯಲ್ಲಿ ಶೋಧನೆ ಕಾರ್ಯಾಚರಣೆಗಳನ್ನು ನಡೆಸಿತು.

ಎಸ್‌ಬಿಐನ ಆಗಿನ ಶಾಖೆಯ ವ್ಯವಸ್ಥಾಪಕ ಅಮರ್ ಕುಲಕರ್ಣಿ ಅವರ ಮೇಲೂ ಶೋಧ ನಡೆಸಲಾಯಿತು. ಶೋಧ ಕಾರ್ಯವೈಖರಿಯು ಸಾಲಗಾರರು ಖರೀದಿಸಿದ ವಿವಿಧ ಸ್ಥಿರಾಸ್ತಿಗಳನ್ನು ಗುರುತಿಸುವುದು. ದೋಷಾರೋಪಣೆಗೆ ಒಳಪಡುವ ದಾಖಲೆಗಳನ್ನು ಪತ್ತೆಹಚ್ಚುವುದು ಹಾಗೂ PMLA, 2002 ರ ಸೆಕ್ಷನ್ 17 ರ ಅಡಿಯಲ್ಲಿ ಅವರ ಆವರಣದಿಂದ ವಿವಿಧ ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು.