ಮನೆ ಸುದ್ದಿ ಜಾಲ ಯತೀಂದ್ರ ಸಿದ್ದರಾಮಯ್ಯನಿಗೆ ಮಿನಿಮಮ್ ಕಾಮನ್‌ಸೆನ್ಸ್ ಇಲ್ಲ – ಬಾಲಕೃಷ್ಣ ವಾಗ್ದಾಳಿ

ಯತೀಂದ್ರ ಸಿದ್ದರಾಮಯ್ಯನಿಗೆ ಮಿನಿಮಮ್ ಕಾಮನ್‌ಸೆನ್ಸ್ ಇಲ್ಲ – ಬಾಲಕೃಷ್ಣ ವಾಗ್ದಾಳಿ

0

ಬೆಳಗಾವಿ : ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಿನಿಮಮ್ ಕಾಮನಸೆನ್ಸ್ ಇಲ್ಲ ಎಂದು ನೇರವಾಗಿ ಮಾಗಡಿ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೈಕಮಾಂಡ್‌ ಹೇಳಿದೆ ಎಂಬ ಯತೀಂದ್ರ ಹೇಳಿಕೆಗೆ ಸುವರ್ಣ ಸೌಧದಲ್ಲಿ ಪ್ರತಿಕ್ರಿಯಿಸಿ, ದೊಡ್ಡವರಿಗೆ ಒಂದು ನ್ಯಾಯ ಚಿಕ್ಕವರಿಗೆ ಒಂದು ನ್ಯಾಯ ಆಗುತ್ತದೆ ಎಂದು ಹೇಳುವ ಮೂಲಕ ಯತೀಂದ್ರಗೆ ನೋಟಿಸ್‌ ನೀಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಕುರ್ಚಿ ಕಿತ್ತಾಟದ ಸಮಯದಲ್ಲಿ ಡಿಕೆಶಿ ಪರ ಬಹಿರಂಗವಾಗಿ ಹೇಳಿಕೆ ನೀಡಿದ್ದಕ್ಕೆ ಕೆಪಿಸಿಸಿ ಶಿಸ್ತು ಸಮಿತಿ ಶಾಸಕರಿಗೆ ನೋಟಿಸ್‌ ಜಾರಿ ಮಾಡಿತ್ತು. ಆದರೆ ಈಗ ಸಿಎಂ ಪುತ್ರ ಯತೀಂದ್ರ ಅವರೇ ನೇರವಾಗಿ ತಂದೆಯ ಪರ ಬ್ಯಾಟ್‌ ಬೀಸಿದ್ದಕ್ಕೆ, ಇನ್ನೂ ಯಾಕೆ ನೋಟಿಸ್‌ ನೀಡಿಲ್ಲ ಎಂದು ಡಿಕೆ ಬೆಂಬಲಿಗ ಶಾಸಕರು ಪ್ರಶ್ನೆ ಮಾಡುತ್ತಿದ್ದಾರೆ.

ಈ ರೀತಿ ಆಗುತ್ತಿರುವುದಕ್ಕೆ ನಮ್ಮ ಇಕ್ಬಾಲ್ ಹುಸೇನ್ ನಾವು ಮಾತನಾಡಿದರೆ ಬಲಾತ್ಕಾರ. ಅವರಿಗೆ ಮಾತನಾಡಿದ್ರೆ ಚಮತ್ಕಾರ ಎಂದು ಅದ್ಭುತವಾಗಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.