ಮನೆ ರಾಜ್ಯ ರೈತರಿಗೆ ಕೊಡಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ – ಗೋಡೌನ್ ಮೇಲೆ ಡಿಆರ್‌ಐ ದಾಳಿ

ರೈತರಿಗೆ ಕೊಡಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟ – ಗೋಡೌನ್ ಮೇಲೆ ಡಿಆರ್‌ಐ ದಾಳಿ

0

ಬೆಂಗಳೂರು : ರೈತರಿಗೆ ಕೊಡಬೇಕಿದ್ದ ಯೂರಿಯಾ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಗೋಡೌನ್ ಮೇಲೆ ದಾಳಿ ನಡೆಸಿದ ಡಿಆರ್‌ಐ 190 ಟನ್ ಯೂರಿಯಾ ವಶಪಡಿಸಿಕೊಂಡಿದೆ. ಯೂರಿಯಾವನ್ನು ರೈತರಿಗೆ ಸಬ್ಸಿಡಿಯಲ್ಲಿ ಕೊಡಲಾಗುತ್ತದೆ. ರೈತರಿಗೆ ಸಬ್ಸಿಡಿಯಲ್ಲಿ ಕೊಡುವ ಯೂರಿಯಾವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. 200 ರೂಪಾಯಿಗೆ ರೈತರಿಗೆ ಸಿಗಬೇಕಿದ್ದ ಯೂರಿಯಾ ಕರ್ಮಷಿಯಲ್‌ಗೆ ಮಾರಾಟವಾಗುತ್ತಿದೆ.

ರೈತರ ಯೂರಿಯಾವನ್ನು ಕೃಷಿ ಇಲಾಖೆ ಮೂಲಕ ಕದ್ದು ತರಲಾಗುತ್ತಿದೆ. ಡೀಲ್ ಮಾಡಿ ತಂದು ಚೀಲ ಬದಲಾವಣೆ ಮಾಡ್ತಾರೆ. 200 ರೂಪಾಯಿ ಯೂರಿಯಾವನ್ನ 1,500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪಿಎಂ ಸಬ್ಸಿಡಿ ಯೂರಿಯಾವನ್ನು ರಾಜ್ಯದ ಕೃಷಿ ಇಲಾಖೆಗೆ ವರ್ಗಾವಣೆ ಮಾಡಿರ್ತಾರೆ. ಅದನ್ನ ಕೃಷಿ ಇಲಾಖೆ ಮೂಲಕ ಜನರಿಗೆ ಮಾರಾಟ ಮಾಡಬೇಕು. ಆದರೆ, ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನ ನಡೆದಿದೆ. ಅಡಕಮಾರನಹಳ್ಳಿ ಗೋಡೌನ್ ಮೇಲೆ ಡಿಆರ್‌ಐ ದಾಳಿ ಬರೋಬ್ಬರಿ 190 ಟನ್ ಯೂರಿಯಾವನ್ನು ವಶಕ್ಕೆ ಪಡೆದಿದೆ.

1,90,000 ಕೆಜಿ ಯೂರಿಯಾ ವಶಕ್ಕೆ ಪಡೆಯಲಾಗಿದೆ. ತಜೀರ್ ಖಾನ್ ಯೂಸುಫ್ ಎಂಬಾತ ಶೆಡ್‌ನ ಬಾಡಿಗೆ ಪಡೆದಿದ್ದ. ಕಳೆದ ಆರು ತಿಂಗಳ ಹಿಂದೆ 40,000 ರೂ.ಗೆ ಬಾಡಿಗೆ ಪಡೆದಿದ್ದ. ಸಲೀಂ ಖಾನ್ ಎಂಬವರಿಗೆ ಸೇರಿದ ಜಾಗ ಇದು. ದಾಸನಪುರ ಹೋಬಳಿ, ಶಿವನಪುರದಲ್ಲಿ ಶೆಡ್ ಇದಾಗಿದ್ದು, ತಮಿಳುನಾಡಿಗೆ ಇಲ್ಲಿಂದ ಪ್ಯಾಕ್ ಮಾಡಿ ಕಳುಹಿಸಲಾಗುತ್ತಿತ್ತು. ಕೇಂದ್ರ ಸರ್ಕಾರದಿಂದ ವಿನಾಯಿತಿ ಆಧಾರದ ಮೇಲೆ 45 ಕೆಜಿ ತೂಕದ ಯೂರಿಯಾ ರಾಜ್ಯಕ್ಕೆ ಕೊಡುತ್ತಿದ್ದರು. ಇದನ್ನು ಇಲ್ಲಿಗೆ ತಂದು 50 ಕೆಜಿ ಚೀಲವನ್ನಾಗಿ ಮಾಡಿ ಬೇರೆ ಚೀಲಗಳಿಗೆ ತುಂಬಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.

ಗೊಬ್ಬರಕ್ಕಾಗಿ ಬೀದಿಯಲ್ಲಿ ನಿಲ್ಲಬೇಕು, ಬೂಟಿನ ಏಟನ್ನು ತಿನ್ನಬೇಕು. ಬಿಸಿಲಲ್ಲಿ ನಿಂತು ರೈತ ಮೂಟೆ ಯೂರಿಯಾಕ್ಕಾಗಿ ಹೈರಾಣಾಗುತ್ತಾರೆ. ಆದರೆ, ಈ ಕಳ್ಳರಿಗೆ ಬೇಕಾದಷ್ಟು ಯೂರಿಯಾ ಕೈ ಸೇರಿದೆ. ಯೂರಿಯಾದ ಕಾಳಸಂತೆಯ ಕರಾಳ ದಂಧೆ ‘ಪಬ್ಲಿಕ್ ಟಿವಿ’ಯಲ್ಲಿ ಅನಾವರಣಗೊಂಡಿದೆ. ರಾಜ್ಯದ ಪಾಲನ್ನು ತಮಿಳುನಾಡಿಗೆ ಮಾರಾಟ ಮಾಡುತ್ತಾ ಇದ್ದ ದಂಧೆ ಬೆನ್ನತ್ತಿರುವ ಡಿಆರ್‌ಐ, ಗೋಡೌನ್ ಮಾಲೀಕರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಕೃಷಿ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತವಾಗಿದೆ. ಕೃಷಿ ಅಧಿಕಾರಿಗಳ ಸಹಾಯ ಇಲ್ಲದೆ ಇಷ್ಟು ದೊಡ್ಡ ದಂಧೆ ನಡೆಸೋದಕ್ಕೆ ಸಾಧ್ಯವಿಲ್ಲ. ಕೃಷಿ ಅಧಿಕಾರಿಗಳ ಅನುಮಾನದಲ್ಲಿ DRI ತನಿಖೆ ಈಗಾಗಲೇ ಗೋಡೌನ್ ಬಳಿಗೆ ಕೃಷಿ ಅಧಿಕಾರಿಗಳಿಗೆ ಸಿಆರ್‌ಐ ಬುಲಾವ್ ನೀಡಿದೆ. ಡಿಆರ್‌ಐ ಅಧಿಕಾರಿಗಳಿಂದ ಕೃಷಿ ಇಲಾಖೆ ಅಧಿಕಾರಿಗಳ ಸಂಪರ್ಕ ಮಾಡಲಾಗಿದೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬರಲು ತಿಳಿಸಿದೆ.

ಕೇಂದ್ರ ಸರ್ಕಾರ 2,321 ರೂ. ಬೆಲೆಯ 45 ಕೆಜಿ ತೂಕದ ಯೂರಿಯಾಗೆ 2054 ರೂ. ಸಬ್ಸಿಡಿ ನೀಡಿ 266 ರೂ.ಗೆ ರಾಜ್ಯಕ್ಕೆ ನೀಡುತ್ತದೆ. ಅದನ್ನು ಕಾಳಸಂತೆಯಲ್ಲಿ 2,500 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗ ಅಧಿಕಾರಿಗಳು ಗೋಡೌನ್ ಸೀಜ್‌ಗೆ ಮುಂದಾಗಿದ್ದಾರೆ. ಕೃಷಿ ಇಲಾಖೆಯಿಂದ ಕಳ್ಳ ಮಾರಾಟ ಮಾಡುತ್ತಿದ್ದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಲಾಗಿದೆ.