ಮನೆ ಪ್ರವಾಸ ತಂಜಾವೂರಿಗೆ ಪ್ರಯಾಣ ಬೆಳೆಸಿದರೆ ತಪ್ಪದೇ ಈ ಪ್ರದೇಶಗಳಿಗೆ ಭೇಟಿ ನೀಡಿ

ತಂಜಾವೂರಿಗೆ ಪ್ರಯಾಣ ಬೆಳೆಸಿದರೆ ತಪ್ಪದೇ ಈ ಪ್ರದೇಶಗಳಿಗೆ ಭೇಟಿ ನೀಡಿ

0

ತಮಿಳುನಾಡಿನ ತಂಜಾವೂರು ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ದ್ರಾವಿಡ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ನೀವು ಮನಸಾರೆ ಕಂಡು ಆನಂದಿಸಬಹುದು. ವಿಜಯನಗರದ ಆಳ್ವಿಕೆಯ ಸಮಯದಲ್ಲಿ ತಂಜಾವೂರು ಅವರ ಅಧೀನದಲ್ಲಿತ್ತು.

ನಂತರದ ದಿನಗಳಲ್ಲಿ ಮರಾಠರ ಕೈಗೆ ಸೇರಿತು. ಕೊನೆಗೆ ಬ್ರಿಟಿಷ್‌ ಹಿಡಿತಕ್ಕೆ ಬಂದಿತು. ತಂಜಾವೂರಿನ ಪ್ರವಾಸವನ್ನು ಚಳಿಗಾಲ ಅಥವಾ ಮಳೆಗಾಲದಲ್ಲಿ ಯೋಜಿಸುವುದು ಬಹಳ ಒಳ್ಳೆಯದು. ಇನ್ನು ಇಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳಿವೆ ಎಂಬುದನ್ನು ಲೇಖನದ ಮೂಲಕ ತಿಳಿಯಿರಿ.

ಬೃಹದೀಶ್ವರ ದೇವಾಲಯ

ತಂಜಾವೂರಿನಲ್ಲಿರುವ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಬೃಹದೀಶ್ವರ ದೇವಾಲಯವು ಒಂದು. ತಂಜಾವೂರಿನ ಪ್ರಾಚೀನ ಈ ಹಿಂದೂ ದೇವಾಲಯಕ್ಕೆ ದೇಶದ ನಾನಾ ಭಾಗಗಳಿಂದ ಸಂದರ್ಶಕರು, ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಚೋಳರ ಅದ್ಭುತವಾದ ವಾಸ್ತುಶಿಲ್ಪ ಶೈಲಿ ನಿಮ್ಮನ್ನು ಬೆಕ್ಕಸ ಬೆರಗಾಗಿಸುತ್ತದೆ.

ಈ ಅದ್ಭುತವಾದ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಭಾಗವಾಗಿದೆ. ಇದನ್ನು ಗ್ರೇಟ್‌ ಲಿವಿಂಗ್‌ ಚೋಳ ದೇವಾಲಯ ಎಂದೇ ಕರೆಯುತ್ತಾರೆ. ಭಗವಾನ್ ಶಿವನಿಗೆ ಸಮರ್ಪಿತವಾದ ಈ ಬೃಹದೀಶ್ವರ ದೇವಾಲಯವನ್ನು ನಿಮ್ಮ ತಮಿಳುನಾಡಿನ ಪ್ರವಾಸದ ಪಟ್ಟಿಯಲ್ಲಿ ಮಿಸ್‌ ಮಾಡಬಾರದು.

​ತಂಜಾವೂರು ಪ್ಯಾಲೆಸ್‌

ತಂಜಾವೂರಿನ ಬೃಹದೀಶ್ವರ ದೇವಾಲಯದಲ್ಲಿನ ಶಿವನ ದರ್ಶನ ಭಾಗ್ಯ ಪಡೆದ ನಂತರ ತಂಜಾವೂರು ಪ್ಯಾಲೆಸ್‌ಗೆ ಭೇಟಿ ನೀಡಿ. ಇದು ದೇವಸ್ಥಾನದಿಂದ ಕೇವಲ 2 ಕಿ.ಮೀ ಗಿಂತ ಕಡಿಮೆ ದೂರದಲ್ಲಿದೆ. ತಂಜಾವೂರು ಪ್ಯಾಲೆಸ್‌ ಅತ್ಯಂತ ಆಕರ್ಷಿಣೀಯ ಐತಿಹಾಸಿಕ ರಚನೆಯಾಗಿದೆ. ಇದು ತಂಜಾವೂರಿನ ಪ್ರಸಿದ್ಧ ಪ್ರವಾಸಿ ತಾಣವು ಹೌದು.

ಅರಮನೆಯು ಬೃಹತ್‌ ಸಭಾಂಗಣ, ವಿಶಾಲವಾದ ಕಾರಿಡಾರ್‌ಗಳು, ಎತ್ತರದ ಗೋಪುರಗಳು ಸೇರಿದಂತೆ ಇನ್ನು ಹಲವಾರು ಆಕರ್ಷಣೆಗಳನ್ನು ಒಳಗೊಂಡಿದೆ.

ಅರಮನೆಯ ಒಳಭಾಗದಲ್ಲಿ ಸರಸ್ವತಿ ಮಹಲ್ ಲೈಬ್ರರಿ, ರಾಯಲ್‌ ಮ್ಯೂಸಿಯಂ, ದರ್ಬಾರ್ ಹಾಲ್‌ ಮತ್ತು ಸಂಗೀತ ಮಹಲ್‌ಗಳನ್ನು ಕಾಣಬಹುದು.

ಕುಂಭಕೋಣಂ

ತಮಿಳುನಾಡು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಕುಂಭಕೋಣಂ ಕೂಡ ಒಂದು. ಇದು ಕೂಡ ಪುರಾತನ ದೇವಾಲಯಗಳ ಪಟ್ಟಣಗಳಲ್ಲಿ ಒಂದಾಗಿದ್ದು, ತಮಿಳುನಾಡಿನ ಪ್ರವಾಸಕ್ಕೆ ಮಿಸ್‌ ಮಾಡಿಕೊಳ್ಳಬಾರದ ಪ್ರವಾಸಿ ತಾಣವಾಗಿದೆ. ಇಲ್ಲಿ ನೀವು ಭವ್ಯವಾದ ದೇವಾಲಯಗಳು ಮತ್ತು ಮಠಗಳಿಗೆ ಹೋಗಬಹುದು.

ಕುಂಭಕೋಣಂನಲ್ಲಿ ಸುಮಾರು 185 ಕ್ಕಿಂತ ಹೆಚ್ಚಿನ ಹಿಂದೂ ದೇವಾಲಯಗಳಿವೆ ಎಂದು ಹೇಳಲಾಗುತ್ತದೆ. ಇಲ್ಲಿ ಸಾಕಷ್ಟು ಶಿವ ದೇವಾಲಯ ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾದ ಕೆಲವು ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಸಾರಂಗಪಾಣಿ ಕುಂಭಕೋಣಂನ ಅತಿ ದೊಡ್ಡ ವೈಷ್ಣವ ದೇವಾಲಯವಾಗಿದೆ.

​ನಾಗೂರ್‌

ನಾಗೂರ್‌ ತಂಜಾವೂರಿನ ಸುಂದರವಾದ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ 16 ನೇ ಶತಮಾನದ ಸಂತ ಮೀರನ್‌ ಸಾಹಿಬ್‌ಗೆ ಸಮರ್ಪಿತವಾದ ಮುಸ್ಲಿಂ ದುರ್ಗಾಕ್ಕೆ ಹೆಸರುವಾಸಿಯಾಗಿದೆ. ಮುಸ್ಲಿಂ ಧಾರ್ಮಿಕ ಸ್ಥಳವಾಗಿದ್ದರೂ, ದರ್ಗಾದ ಆಚರಣೆಗಳು ಮತ್ತು ವಾಸ್ತುಶಿಲ್ಪವು ಹಿಂದೂ ಧರ್ಮದಿಂದ ಪ್ರಭಾವಿತವಾಗಿದೆ.

​ತಿರುಚಿರಪ್ಪಲ್ಲಿ

ತಮಿಳುನಾಡಿನ 4 ನೇ ದೊಡ್ಡ ನಗರವಾಗಿರುವ ತಿರುಚಿರಪ್ಪಲ್ಲಿಯಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳ ಮತ್ತು ದೇವಾಲಯಗಳಿಗೆ ನೆಲೆಯಾಗಿದೆ. ಇನ್ನು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ರಾಕ್‌ಫೋರ್ಟ್‌ ದೇವಾಲಯ, ಬೃಹತ್‌ ಬಂಡೆಯ ಮೇಲೆ ನೆಲೆಸಿರುವ ಅದ್ಭುತ ಸ್ಮಾರಕವು ಹಳೆಯ ನಗರವಾದ ತಿರುಚ್ಚಿಯಲ್ಲಿರುವ ಪ್ರಮುಖ ಸ್ಮಾರಕಗಳಾಗಿವೆ.

ಇನ್ನು ದೇವಾಲಯ, ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಸೇಂಟ್‌ ಜಾನ್ಸ್‌ ಚರ್ಚ್ ತಿರುಚಿರಪ್ಪಲ್ಲಿಯಲ್ಲಿ ಭೇಟಿ ನೀಡಬಹುದಾದ ಇತರ ಸ್ಥಳಗಳಾಗಿವೆ. ತಿರುಚಿರಾಪಳ್ಳಿಯಲ್ಲಿ ಶಾಪಿಂಗ್‌ ಮಾಡಲು ಬೆಸ್ಟ್ ತಾಣವಾಗಿದೆ. ಕೈಮಗ್ಗದ ಸೀರೆಗಳು, ಕಲ್ಲುಗಳಿಂದ ತಯಾರಿಸಿದ ಆಭರಣಗಳನ್ನು ಇಲ್ಲಿ ಖರೀದಿ ಮಾಡಬಹುದು.

ಹಿಂದಿನ ಲೇಖನಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾಲತಾಣದಿಂದ ಹಿಂದಿ ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ: ಸಿದ್ದರಾಮಯ್ಯ
ಮುಂದಿನ ಲೇಖನಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ರಾಜ್ಯಪಾಲರಿಂದ ಸನ್ಮಾನ