ಬೆಂಗಳೂರು : ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಶುದ್ದ ಗಾಳಿಯ ಸೂಚ್ಯಂಕದಲ್ಲಿ ಕುಸಿತ ಆಗುತ್ತಿದೆ. ಗಾಳಿ ಗುಣಮಟ್ಟ ಕುಸಿತ ಆಗುವುದಕ್ಕೆ ಕಾರಣ ಏನು? ಬೆಂಗಳೂರಿನ ಯಾವ ಭಾಗದಲ್ಲಿ ಗಾಳಿ ಗುಣಮಟ್ಟ ಕುಸಿತ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸೆನ್ಸರ್ ಅಳವಡಿಕೆ ಮಾಡಲು ಮುಂದಾಗಿದೆ.
ಗಾಳಿಯ ಗುಣಮಟ್ಟ ಕುಸಿತಕ್ಕೆ ಟ್ರಾಫಿಕ್ ಕಾರಣವೇ? ಕಟ್ಟಡ ನಿರ್ಮಾಣದ ಅವಶೇಷನಾ ಅಥವಾ ಬೇರೆ ಕಾರಣ ಏನಾದರೂ ಇದೆಯಾ ಎಂದು ಪತ್ತೆ ಹಚ್ಚಲು ಬೆಂಗಳೂರಿನ 85 ಮೆಟ್ರೋ ನಿಲ್ದಾಣ, 55 ಬಿಎಂಟಿಸಿಯ ಟಿಟಿಎಂಸಿ ಕಟ್ಟಡ , ಪ್ರಮುಖ ರಸ್ತೆ ಮತ್ತು ಫ್ಯಾಕ್ಟರಿಗಳು ಇರುವ ಏರಿಯಾ ಕಡೆ ಸೆನ್ಸರ್ ಅಳವಡಿಕೆ ಮಾಡಲು ಮುಂದಾಗಿದೆ.
0-50 ವಾಯು ಗುಣಮಟ್ಟ ಬಂದರೆ ಉತ್ತಮ ವಾತಾವರಣ ಅಂತಾ ಪರಿಗಣಿಸಲಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಬಹುತೇಕ ಕೂಡ ವಾಯುಮಾಲಿನ್ಯ ಪ್ರಮಾಣ ಏರಿಕೆ ಆಗುತ್ತಿದೆ. ಹೆಬ್ಬಾಳ, ಜಯನಗರ, ನಿಮ್ಹಾನ್ಸ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಸಿಟಿ ರೈಲ್ವೇ ನಿಲ್ದಾಣ, ಬಸವೇಶ್ವರ ನಗರ, ಜಿಗಣಿ, ಕಸ್ತೂರಿನಗರ, ಪೀಣ್ಯ ಭಾಗಗಳಲ್ಲಿ ವಾಯು ಗುಣಮಟ್ಟ 100 ದಾಟಿರುವುದು ಆತಂಕ ಹೆಚ್ಚಿಸಿದೆ.















