ಮನೆ ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಎಸ್ಕಾರ್ಟ್‌ ವಾಹನ ಪಲ್ಟಿ: ಇಬ್ಬರಿಗೆ ಗಾಯ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಎಸ್ಕಾರ್ಟ್‌ ವಾಹನ ಪಲ್ಟಿ: ಇಬ್ಬರಿಗೆ ಗಾಯ

0

ಬ್ರಹ್ಮಾವರ‌ (Bramavara): ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಎಸ್ಕಾರ್ಟ್‌ ವಾಹನ ಅಪಘಾತಕ್ಕೀಡಾಗಿ ಇಬ್ಬರಿಗೆ ಗಾಯಗೊಂಡಿರುವ ಘಟನೆ ನಡೆದಿದೆ.

ಸಚಿವರ ಬೆಂಗಾವಲು ಸಿಬ್ಬಂದಿ ಗಣೇಶ್ ಆಳ್ವ ಹಾಗೂ ಕಾರು ಚಾಲಕ ಚರಣ್ ಅವರಿಗೆ ಗಾಯಗಳಾಗಿವೆ. ಸಿಬ್ಬಂದಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಕೆಜಿ ರೋಡ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಸ್ಕಾರ್ಟ್‌ ವಾಹನ ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಬೆಂಗಾವಲು ವಾಹನದ ಎದುರು ಸಂಚರಿಸುತಿದ್ದ ಲಾರಿ ಸೂಚನೆ ನೀಡದೆ ಏಕಾಏಕಿ ಪಥ ಬದಲಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಹಿಂದಿನ ಲೇಖನಮೊದಲ ಏಕದಿನ ಪಂದ್ಯ: 110ಕ್ಕೆ ಇಂಗ್ಲೆಂಡ್‌ ಆಲ್‌ ಔಟ್‌
ಮುಂದಿನ ಲೇಖನವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ