ಮನೆ ಸುದ್ದಿ ಜಾಲ ನ್ಯೂಇಯರ್ ಸೆಲೆಬ್ರೇಷನ್‌ಗೆ ವಿದೇಶಕ್ಕೆ ಹಾರಿದ ನಟ ವಿಜಯ್‌, ನಟಿ ರಶ್ಮಿಕಾ

ನ್ಯೂಇಯರ್ ಸೆಲೆಬ್ರೇಷನ್‌ಗೆ ವಿದೇಶಕ್ಕೆ ಹಾರಿದ ನಟ ವಿಜಯ್‌, ನಟಿ ರಶ್ಮಿಕಾ

0

ನ್ಯೂಇಯರ್ ಸೆಲೆಬ್ರೇಷನ್‌ಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೊತೆಯಾಗಿ ವಿದೇಶ ಪ್ರಯಾಣ ಮಾಡಿದ್ದಾರೆ. ಇಬ್ಬರೂ ಒಂದೇ ದಿನ ಒಂದೇ ಸಮಯಕ್ಕೆ ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದು, ಹೊಸ ವರ್ಷದ ಆಚರಣೆಗೆ ವಿದೇಶಕ್ಕೆ ಹಾರಿದ್ದಾರೆ ಎಂದು ತಿಳಿದುಬಂದಿದೆ.

ಮದುವೆಗೂ ಮುನ್ನ ಈ ಜೋಡಿ ಬ್ಯಾಚುಲರ್ ಜೀವನದ ಕೊನೆಯ ನ್ಯೂಇಯರ್ ಸೆಲೆಬ್ರೇಷನ್ ಎಂಜಾಯ್ ಮಾಡಲು ವಿದೇಶಕ್ಕೆ ಹೋಗಿರುವ ಸಾಧ್ಯತೆಯಿದೆ. ಹಿಂದೆ ಅನೇಕ ಬಾರಿ ಒಟ್ಟಿಗೆ ಪ್ರಯಾಣ ಮಾಡಿರುವ ರಶ್ಮಿಕಾ, ವಿಜಯ್ ಈಗಲೂ ಜಂಟಿಯಾಗಿ ಜಾಲಿ ಟ್ರಿಪ್ ಮಾಡಿದ್ದಾರೆ ಎನ್ನಲಾಗಿದೆ.

ಸೋಶಿಯಲ್ ಮೀಡಿಯಾ ಆಫ್‌ಮೋಡ್‌ನಲ್ಲಿಟ್ಟುಕೊಂಡು ಎಂಜಾಯ್ ಮಾಡ್ತಿರುವ ಜೋಡಿ ಮುಂದೆ ಯಾವ ದೇಶಕ್ಕೆ ಪ್ರಯಾಣ ಬೆಳೆಸಿದೆ ಅನ್ನೋದು ರಿವೀಲ್ ಆಗಲಿದೆ. ಇದುವರೆಗೂ ರಶ್ಮಿಕಾ ವಿಜಯ್ ಪ್ರೀತಿಸುತ್ತಿರುವ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ನಡುವೆ ಮದುವೆಯ ದಿನಾಂಕವೂ ಫಿಕ್ಸ್ ಆಗಿದ್ದು, ಫೆಬ್ರವರಿ 26ಕ್ಕೆ ಇಬ್ಬರೂ ಮದುವೆಯಾಗಲಿದ್ದಾರೆ ಎಂಬುದು ವರದಿಯಾಗಿದೆ.