ಮನೆ ರಾಜ್ಯ ಭೀಮನ ಹತ್ರ ಹೋಗಿ ವೀಡಿಯೋ, ಫೋಟೋ ತೆಗೆದ್ರೆ ಬೀಳುತ್ತೆ ಕೇಸ್‌..!

ಭೀಮನ ಹತ್ರ ಹೋಗಿ ವೀಡಿಯೋ, ಫೋಟೋ ತೆಗೆದ್ರೆ ಬೀಳುತ್ತೆ ಕೇಸ್‌..!

0

ಮಲೆನಾಡು ಭಾಗದ ಗ್ರಾಮಗಳಿಗೆ ಕಾಡಾನೆ ಭೀಮ ಎಂಟ್ರಿ ಕೊಡುತ್ತಿದೆ. ಶಾಂತ ಸ್ವಭಾವದ ಭೀಮನನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಅಲ್ಲದೇ ಫೋಟೋ ತೆಗೆಯಲು, ವೀಡಿಯೋ ಮಾಡಲು ಮುಂದಾಗುತ್ತಿದ್ದಾರೆ. ಜನರ ನಡೆಯಿಂದ ಆನೆಗೆ ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಎಫ್‌ಓ ಸೌರಭ್‌ಕುಮಾರ್, ಕಾಡಾನೆ ಭೀಮ ಗ್ರಾಮ, ತೋಟಗಳಿಗೆ ಬರುತ್ತಿದೆ. ಇಟಿಎಫ್ ತಂಡ 24 ಗಂಟೆಗಳ ಕಾಲ ಕಾಡಾನೆ ಭೀಮನನ್ನು ಗಮನಿಸುತ್ತಿದೆ. ಈಗಾಗಲೇ ಸಾರ್ವಜನಿಕರಿಗೆ ವಿನಂತಿ ಮಾಡಿ, ಎಚ್ಚರಿಕೆ ಕೊಡಲಾಗಿದೆ. ಸೆಕ್ಷನ್ 216, ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ 19/70 (ವನ್ಯಜೀವಿ ಸಂರಕ್ಷಣೆ ಕಾಯ್ದೆ) ಪ್ರಕಾರ ಪ್ರಾಣಿಗಳಿಗೆ ತೊಂದರೆ ನೀಡುವುದು ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ದಯವಿಟ್ಟು ಕಾಡು ಪ್ರಾಣಿಗಳ ಹತ್ತಿರ ಯಾರು ಹೋಗಬಾರದು. ನಿಮ್ಮ ಪ್ರಾಣವನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಕಾಡು ಪ್ರಾಣಿ, ಕಾಡು ಪ್ರಾಣಿನೇ, ಹೀಗಾಗಿ ಜನ ಅನಾವಶ್ಯಕವಾಗಿ ಆನೆಗೆ ತೊಂದರೆ ಕೊಡಬಾರದು. ಇನ್ಮುಂದೆ ಭೀಮನ ಸಮೀಪ ಹೋಗಿ ವಿಡಿಯೋ ಚಿತ್ರೀಕರಣ ಮಾಡಿದರೆ ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಡಿಎಫ್‌ಓ ಸೌರಭ್‌ಕುಮಾರ್ ಹೇಳಿದ್ದಾರೆ.

ಇಟಿಎಫ್ ಸಿಬ್ಬಂದಿ ಭೀಮನನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಇನ್ನೊಮ್ಮೆ ಎಚ್ಚರಿಕೆ ನೀಡುತ್ತಿದ್ದು ಯಾರು ಕಾಡಾನೆ ಭೀಮನ ಬಳಿ ವೀಡಿಯೋ, ಫೋಟೋ ತೆಗೆದುಕೊಳ್ಳಬಾರದು ಎಂದಿದ್ದಾರೆ.