ಮನೆ ರಾಜ್ಯ ದೇಸಿ ಆಟವಾಡಿ ಸಂಭ್ರಮಿಸಿದ ಚಿಣ್ಣರು

ದೇಸಿ ಆಟವಾಡಿ ಸಂಭ್ರಮಿಸಿದ ಚಿಣ್ಣರು

0

ಮೈಸೂರು(Mysuru): ಮೊಬೈಲ್ ಹಿಡಿದು ಆಟವಾಡುತ್ತಾ ಮೈಮರೆಯುತ್ತಿದ್ದ ಚಿಣ್ಣರು ಇಂದು ದೇಸಿ ಆಟಗಳಾದ ಕುಂಟೆ ಬಿಲ್ಲೆ, ಬುಗುರಿ, ಚೌಕಾಬಾರ ಆಡಿ ಸಂಭ್ರಮಿಸಿದರು.

ಮೈಸೂರು ದಸರಾ ಅಂಗವಾಗಿ ಮಕ್ಕಳ ದಸರಾ ಉಪ ಸಮಿತಿಯಿಂದ ದೇಸಿ ಆಟಗಳ ಸ್ಪರ್ಧೆಗಳನ್ನು ಮಹಾರಾಣಿ ಪ್ರಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ನಡೆಸಲಾಯಿತು.

ದೇಸಿ ಆಟಗಳ ಜೊತೆಗೆ ರಸಪ್ರಶ್ನೆ ಸ್ಪರ್ಧೆಯಲ್ಲಿಯೂ ವಿವಿಧ ಶಾಲೆಗಳ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

ಡಿಡಿಪಿಐ ರಾಮಚಂದ್ರರಾಜೇ ಅರಸ್ ಬುಗುರಿ ಬಿಡುವ ಮೂಲಕ ಉದ್ಘಾಟಿಸಿದರು.

ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಸದಸ್ಯರು, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ಉಪ ನಿರ್ದೇಶಕರ ಕಚೇರಿಯ ಉಪಯೋಜನಾ ಸಮನ್ವಯಾಧಿಕಾರಿ ಬಿ.ಉದಯ್ ಕುಮಾರ್, ರಾಜಶೇಖರ್, ಸಹಾಯಕ ಯೋಜನಾ ಸಮನ್ವಯಾಧಿಕಾರಿ ಕೆ.ಸುರೇಶ್ ಪಾಲ್ಗೊಂಡಿದ್ದರು.

ಹಿಂದಿನ ಲೇಖನಸೆಂಟ್ರಲ್ ವಿಸ್ಟಾದ ರಾಷ್ಟ್ರೀಯ ಲಾಂಛನ ವಿವಾದ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಮುಂದಿನ ಲೇಖನಖರ್ಜೂರದ ಜೊತೆ ಕಡಲೆ ತಿಂದರೆ ತೂಕ ಹೆಚ್ಚುತ್ತೆ