ಮನೆ ರಾಜ್ಯ ರಾಜ್ಯದ ವಲಸಿಗರಿಗೆ ಸರ್ಕಾರದಿಂದ ಸವಲತ್ತುಗಳು ಕೊಟ್ಟು ಕಡೆಗಣನೆ; ಸೂರು ಕಲ್ಪಿಸುತ್ತಿರುವುದನ್ನು ಖಂಡಿಸಿ, ಆಗ್ರಹ..!

ರಾಜ್ಯದ ವಲಸಿಗರಿಗೆ ಸರ್ಕಾರದಿಂದ ಸವಲತ್ತುಗಳು ಕೊಟ್ಟು ಕಡೆಗಣನೆ; ಸೂರು ಕಲ್ಪಿಸುತ್ತಿರುವುದನ್ನು ಖಂಡಿಸಿ, ಆಗ್ರಹ..!

0

ಮೈಸೂರು : ಕನ್ನಡಿಗರ ತೆರಿಗೆ ಹಣದಿಂದ ಹೊರ ರಾಜ್ಯದ ವಲಸಿಗರಿಗೆ ಸರ್ಕಾರದಿಂದ ಸವಲತ್ತುಗಳನ್ನು ಕೊಟ್ಟು ಕನ್ನಡಿಗರಿನ್ನು ಕಡೆಗಣಿಸುತ್ತಿರುವುದಲ್ಲದೆ, ಅವರಿಗೆ ಸ್ವಂತ ಸೂರು ಕಲ್ಪಿಸುತ್ತಿರುವುದನ್ನು ಖಂಡಿಸಿ ಮತ್ತು ಶೀಘ್ರವೇ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಲು ಆಗ್ರಹಿಸಿದ್ದಾರೆ.

ಕರ್ನಾಟಕದ ರಾಜಧಾನಿಯೂ ಸೇರಿದಂತೆ ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹೊರ ರಾಜ್ಯಗಳಿಂದ ವಲಸೆ ಬಂದು, ನಮ್ಮ ನೆಲದ ಕನ್ನಡಿಗರ ಉದ್ಯೋಗಕ್ಕೆ ಕುತ್ತು ತರುತ್ತಿರುವ ಹೊರ ರಾಜ್ಯದ ವಲಸಿಗರು ಆಟೋ ಚಾಲಕರಾಗಿ, ಕಾರು ಚಾಲಕರಾಗಿ, ಸ್ಥಳೀಯ ಹೋಟೆಲ್‌ಗಳಿಂದ ಹಿಡಿದು ದೊಡ್ಡ ಹೋಟೇಲ್‌ಗಳಲ್ಲಿ, ಕಾರ್ಖಾನೆಗಳಲ್ಲಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ, ಭದ್ರತಾ ಸಂಸ್ಥೆಗಳಲ್ಲಿ, ಬೀದಿ ಬದಿ ವ್ಯಾಪರಗಳಲ್ಲಿಯೂ ಸಹ ಹೊರ ರಾಜ್ಯದ ಆಕ್ರಮ ವಲಸಿಗರೇ ತುಂಬಿದ್ದು, ಇಂತವರಿಂದ ಕನ್ನಡ, ಕನ್ನಡಿಗ, ಕರ್ನಾಟಕದ ಜನರು ಉದ್ಯೋಗ ವಂಚಿತರಾಗಿದ್ದರೆ.

ಇದರ ಬಗ್ಗೆ ಸರ್ಕಾರ ಗಮನ ಹರಿಸಿ ಇಂತಹ ಆಕ್ರಮ ವಲಸಿಗರಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸದೆ, ಅದೇ ಅಕ್ರಮ ವಲಸಿಗರಿಗೆ ನಿವೇಶನ ನೀಡಲು ಹೊರಟಿದೆ. ಇಂತಹ ಸರ್ಕಾರದಿಂದ ಕನ್ನಡಿಗರಿಗೆ ನ್ಯಾಯ ಸಿಗಲು ಸಾಧ್ಯವೇ..? ಮುಖ್ಯಮಂತ್ರಿಗಳು ಡಿಸೆಂಬರ್ ೨೮ನೇ ತಾರೀಖಿನಂದು ಕನ್ನಡಿಗರ ಒಗ್ಗಟ್ಟಿನ ಶಕ್ತಿ ಜನ ರಾಜ್ಯೊತ್ಸವ ಕಾರ್ಯಕ್ರಮಕ್ಕೆ ಆಗಮಿಸಿ, ಕನ್ನಡಿಗರಿಗೆ ಯಾವ ರೀತಿಯಲ್ಲೂ ಅನ್ಯಾಯ ಆಗಲೂ ಬಿಡುವುದಿಲ್ಲ ಎಂಬ ಘೋಷಣೆ ಮಾಡಿ ಹೋದ
ಒಂದೇ ದಿನಕ್ಕೆ “ಬೆಂಗಳೂರಿನ ಕೋಗಿಲು ಬಡಾವಣೆಯ ಆಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ಹಂಚಿಕೆ ಮಾಡುತ್ತೇವೆ” ಎನ್ನುವ ನಿಮ್ಮ ನಿರ್ಧಾರ ಎಷ್ಟು ಸರಿ ಮುಖ್ಯಮಂತ್ರಿಗಳೇ ? ಹಾಗಿದ್ದರೆ, ಎಂದರು.

ಕನ್ನಡಿಗರ ಕಣ್ಣು ಹೊರಿಸುವ ಸಲುವಾಗಿಯೊ ಅಥವಾ ಆಕ್ರಮ ವಲಸಿಗರಿಗೆ ಸೂರು ಕಲ್ಪಿಸುವ ಸಲುವಾಗಿಯೋ ಡಿಸೆಂಬರ್ 20 ನೇ ತಾರೀಖಿನಂದು ಅವರನ್ನು ಕೋಗಿಲು ಬಡಾವಣೆಯಿಂದ ತೆರುವುಗೊಳಿಸುವ ನಾಟಕವಾಡಿದ್ದ ನಿಮ್ಮ ಸರ್ಕಾರ, ಉತ್ತರ ಕರ್ನಾಟಕದ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ರೈತರ ಜಮೀನು ಪಡೆದು ಅವರನ್ನು ನಿರಾಶ್ರಿತರಾಗಿರುವ ಅವರಿಗೆ ಪರಿಹಾರ ಕೊಡದೇ, ಆ ಕನ್ನಡಿಗರ ನೋವು-ಗೋಳು ನಿಮಗೆ ಕಾಣುತ್ತಿಲ್ಲವೇ ? ವಿಚಾರಗಳನ್ನು, ನಿಮ್ಮ ನಡೆಯನ್ನು ಕನ್ನಡಿಗರು ಗಮನಿಸುತ್ತಿದ್ದಾರೆ.

ಮುಖ್ಯಮಂತ್ರಿಗಳೇ ಡಿಸೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎಲ್ಲಾ ಕನ್ನಡ ಪರ ಸಂಘಟನೆಗಳು ಒಂದಾಗಿ ನಡೆದ ಕಾರ್ಯಕ್ರಮದಲ್ಲಿ ನೀವು ಕನ್ನಡಿಗರಿಗೆ ನೀಡಿದ ವಾಗ್ದಾನ ಮರೆಯದಿರಿ, ಮರೆತು ವಚನ ಭ್ರಷ್ಟರಾಗದಿರಿ ಮುಖ್ಯಮಂತ್ರಿಗಳೆ. ನಿಮಗೆ ನಾವು ಕನ್ನಡರಾಮಯ್ಯ ಎಂದು ಉಚ್ಚರಿಸಿ ವೇದಿಕೆಗೆ ಆಹ್ವಾನಸಿದ ಸಂದರ್ಭದಲ್ಲಿ ನಾನೂ ಸಹ ಕನ್ನಡಿಗರ, ಕನ್ನಡ ಭಾಷೆಯ ಪರವಾಗಿದ್ದೇನೆ ಎಂದು ತಿಳಿಸಿದ್ದಿರಿ.

ನೀವು ನಿಜವಾಗಿಯೂ ಕನ್ನಡಿಗರ ಪರವಾಗಿ ಇದ್ದರೆ, ನೀವು ವಚನ ಕೊಟ್ಟಂತೆ ಶೀಘ್ರವೇ ಸಚಿವ ಸಂಪುಟ ಸಭೆ ಕರೆದು ಕನ್ನಡ, ಕನ್ನಡಿಗರು, ಕರ್ನಾಟಕದ ಪರವಾಗಿರುವ ಕನ್ನಡ ಮಕ್ಕಳ ಉದ್ಯೋಗದ ಪರವಾಗಿರುವ ಡಾ. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಕ್ಕೆ ತಂದು ನೀವು ನಿಜವಾಗಿಯೂ ಕನ್ನಡ ಪರವಾಗಿದ್ದೀರಿ ಎಂದು ಸಾಬೀತು ಪಡಿಸಬೇಕೆಂದು ಎಲ್ಲ ಕನ್ನಡ ಪರ ಚಳುವಳಿಗಾರರ ಪರವಾಗಿ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಆಗ್ರಹಿಸುತ್ತಿದೆ.