ಮನೆ ದೇವರ ನಾಮ ಶ್ರೀದೇವಿ ನೀನಮ್ಮ ಮೂಕಾಂಬಿಕೆ

ಶ್ರೀದೇವಿ ನೀನಮ್ಮ ಮೂಕಾಂಬಿಕೆ

0

ಶ್ರೀದೇವಿ ನೀನಮ್ಮ ಮೂಕಾಂಬಿಕೆ

ನೂರಾರು ನಮಸ್ಕಾರ ಸಿರಿ ಪಾದಕೆ

ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ

ನಿನಗಾರು ಸರಿಸಾಟಿ ಭೂಲೋಕದಲ್ಲಿ||ಪ||

ಜಯದೇವಿ ಜಯಜನನಿ ಜನನಾಯಕಿ

ಜಯ ವಿಜಯ ನೀ ನೀಡು ಜಗದ್ರಕ್ಷಕಿ

ಕೊಡಚಾದ್ರಿಯಿಂದಿಳಿದ ಕರುಣಾಮಯಿ

ಕೊಲ್ಲೂರಿನಲ್ಲಿ ಇರುವ ಮಮತಾಮಯಿ ||೧||

ಚಾಮುಂಡಿ ನೀನೇ ಮಹಾಲಕ್ಷ್ಮಿ ನೀನೇ

ಶೃಂಗೇರಿಯಲ್ಲಿರುವ ಶಾರದೆಯು ನೀನೇ

ಶ್ರೀ ಶಂಕರಾಚಾರ್ಯರ ಆರಾಧ್ಯ ದೇವಿ

ಶ್ರೀ ಶಕ್ತಿ ನೀನೇ ಹೇ ದೇವಿ ಮಹಾದೇವಿ ||೨||

ಆನಂದ ಸುಧೆಯಲ್ಲಿ ಮೀಸುತ ಜಗವ

ನೀ ತರುವೆ ಅಂಬೆ ಪರ ಪರಿವಿಭವ

ಮಣಿದ್ವೀಪದಲ್ಲಿರುವ ಮಹಾದೇವಿ ಶರಣು

ಮನದ ಮಂದಾರದ ಮಹಾದೇವಿ ಶರಣು ||೩||

ಹಿಂದಿನ ಲೇಖನರೈತರೊಂದಿಗೆ ಸಂಧಾನ ಸಫಲ: ಕೇಂದ್ರ ಸಚಿವ ಅಮಿತ್ ಶಾ ಅವರನ್ನು ರೈತರಿಗೆ ಭೇಟಿ ಮಾಡಿಸುವುದಾಗಿ ಸಚಿವ ಕೆ.ಗೋಪಾಲಯ್ಯ ಭರವಸೆ
ಮುಂದಿನ ಲೇಖನನಟರಾಜಾಸನದ ಲಾಭಗಳನ್ನು ತಿಳಿಯಿರಿ