ಮನೆ ಸುದ್ದಿ ಜಾಲ ವಿಜಯ್ ದೇವರಕೊಂಡ – ರಶ್ಮಿಕಾ ನಟನೆಯ ಸಿನಿಮಾ ಹಿಂದಿಯಲ್ಲಿ ರಿಮೇಕ್

ವಿಜಯ್ ದೇವರಕೊಂಡ – ರಶ್ಮಿಕಾ ನಟನೆಯ ಸಿನಿಮಾ ಹಿಂದಿಯಲ್ಲಿ ರಿಮೇಕ್

0

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದ, ಸಿನಿಮಾ ಈಗ ಹಿಂದಿಯಲ್ಲಿ ರಿಮೇಕ್ ಆಗ್ತಿದೆ. 2019ರಲ್ಲಿ ತೆರೆಕಂಡು ಸೌತ್‌ನಲ್ಲಿ ಸಖತ್ ಸೌಂಡ್ ಮಾಡಿದ್ದ, ಡಿಯರ್ ಕಾಮ್ರೇಡ್ ಚಿತ್ರ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಹಾಗೂ ಪ್ರತಿಭಾ ರಾಂಟಾ ನಟಿಸುತ್ತಿದ್ದಾರೆ.

ಧರ್ಮ ಪ್ರೊಡಕ್ಷನ್‌ನಲ್ಲಿ ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಭರ್ತಿ ಆರು ವರ್ಷಗಳ ಬಳಿಕ ಹಿಂದಿಯಲ್ಲಿ ರಿಮೇಕ್ ಆಗಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾರನ್ನ ಇಡೀ ಸೌತ್ ಇಂಡಸ್ಟ್ರಿ ಮೆಚ್ಚಿಕೊಂಡಿದೆ. ಗೀತಾ ಗೋವಿಂದಂ ಸೂಪರ್ ಹಿಟ್ ಬಳಿಕ ಈ ಜೋಡಿ ಮತ್ತೊಂದು ಬಾರಿ ಒಟ್ಟಾಗಿ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿತ್ತು.

ವಿಜಯ್ ಹಾಗೂ ರಶ್ಮಿಕಾ ಸದ್ಯ ಮದ್ವೆಯಾಗಲು ತಯಾರಿಯನ್ನು ನಡೆಸುತ್ತಿದ್ದಾರೆ. ಇದೇ ವರ್ಷ ಫೆ.26ಕ್ಕೆ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಇದೇ ವೇಳೆ ಈ ಸುದ್ದಿ ಜೋಡಿಗೆ ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ.