ಮನೆ ರಾಜ್ಯ ಬಳ್ಳಾರಿ ಬ್ಯಾನರ್‌ ಕೇಸ್‌; ತನಿಖೆ ನಡೆಯುತ್ತಿದೆ, ಯಾರನ್ನೂ ಬಿಡಲ್ಲ – ಸಚಿವ ಜಮೀರ್

ಬಳ್ಳಾರಿ ಬ್ಯಾನರ್‌ ಕೇಸ್‌; ತನಿಖೆ ನಡೆಯುತ್ತಿದೆ, ಯಾರನ್ನೂ ಬಿಡಲ್ಲ – ಸಚಿವ ಜಮೀರ್

0

ಬಳ್ಳಾರಿ : ಬ್ಯಾನರ್‌ ಕಟ್ಟುವ ವಿಚಾರದಲ್ಲಿ ಘರ್ಷಣೆ ಆಗಿದೆ, ಇದು ಆಗಬಾರದಿತ್ತು. ನಾನು ಈಗಾಗಲೇ ಬಳ್ಳಾರಿ ಡಿಸಿ, ಎಸ್‌ಪಿ ಜೊತೆಗೆ ಮಾತನಾಡಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಈಗ ಕಂಟ್ರೋಲ್‌ಗೆ ಬಂದೆದೆ. ಮುಖ್ಯಮಂತ್ರಿಗಳಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನೂ ಬಿಡೋದಿಲ್ಲ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಬಳ್ಳಾರಿ ಫೈರಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾನೆ‌. ಫೈರಿಂಗ್ ಹೇಗೆ ಆಯ್ತು? ಅಂತಾ ಪೊಲೀಸರು ತನಿಖೆ ಮಾಡ್ತಾ ಇದಾರೆ. ಸಿಎಂ ಸಹ ಈ ಘಟನೆಗೆ ಬೇಸರ ವ್ಯಕ್ತಪಡಿಸಿ ಸಿಟ್ಟು ಮಾಡಿಕೊಂಡಿದ್ದಾರೆ. ಯಾರೇ ಇದ್ರೂ ಕ್ರಮ ಕೈಗೊಳ್ತೀವಿ. ನಾಗೇಂದ್ರ ಬಳ್ಳಾರಿಗೆ ಹೋಗ್ತಾ ಇದ್ದಾರೆ. ನಾನು ಸಹ ಇಂದು ಸಂಪುಟ ಸಭೆ ಬಳಿಕ, ಸಿಎಂ ಜೊತೆ ಕೋಗಿಲು ಲೇಔಟ್ ಸಭೆ ಮುಗಿಸಿ ಬಳ್ಳಾರಿಗೆ ಹೋಗ್ತೀನಿ ಅಂತಾ ಸ್ಪಷ್ಟಪಡಿಸಿದ್ದಾರೆ.

ಜನಾರ್ದನ ರೆಡ್ಡಿ ಟಾರ್ಗೆಟ್ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್, ಯಾರನ್ನೋ ಟಾರ್ಗೆಟ್ ಮಾಡಿದ್ದಾರೆ ಅನ್ನೋದು ಸುಳ್ಳು. ಇದು ಸಣ್ಣ ವಿಚಾರಕ್ಕೆ ಆಗಿರುವ ಗಲಾಟೆ. ಇದು ಸರಿ ಮಾಡಬಹುದಿತ್ತು, ಬ್ಯಾನರ್ ಕಟ್ಟಿರೋದು ನಿಜ, ಅಂಟಿಸಿರೋದು ನಿಜ. ಇದು ಸಣ್ಣ ವಿಚಾರಕ್ಕೆ ಆಗಿರುವುದು. ಅಮಾಯಕ ಬಲಿಯಾಗಿದ್ದಾನೆ ಅಂತ ಹೇಳಿದ್ದಾರೆ.

ʻಬಳ್ಳಾರಿ ರಿಪಬ್ಲಿಕ್ʼ ಆಗಿದೆ ಎಂಬ ಬಿಜೆಪಿ ಆರೋಪ ತಳ್ಳಿಹಾಕಿದ ಜಮೀರ್, ಇದು ಅಂತಹ ಘಟನೆ ಅಲ್ಲ. ಸಣ್ಣ ಘಟನೆಗೆ ಗಲಾಟೆ ಆಗಿ ದೊಡ್ಡದಾಗಿದೆ. ಇದು ಆಗಬಾರದಿತ್ತು. ಈಗ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ. ಈ ಘಟನೆ ಬಗ್ಗೆ ಸಚಿವ ಸತೀಶ್‌ ಜಾರಕಿಹೊಳಿ ಬೆಂಗಳೂರಿನಲ್ಲಿ ಮಾತನಾಡಿ, ಶನಿವಾರ ಸಂಜೆ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಆಗಬೇಕಿತ್ತು. ಜನಾರ್ದನ ರೆಡ್ಡಿ ಮನೆ ಮುಂದೆ ಪೋಸ್ಟರ್ ಹಾಕಿದ್ದಕ್ಕೆ ಘರ್ಷಣೆ ಆಗಿದೆ. ಕಾಂಗ್ರೆಸ್ ಕಾರ್ಯಕರ್ತನ ಸಾವಾಗಿದೆ. ಮೊದಲು ಪೊಲೀಸ್ ತನಿಖೆ ಆಗಬೇಕು. ಪೊಲೀಸ್ ಏನು ವರದಿ ಕೊಡ್ತಾರೆ ನೋಡೋಣ ಎಂದಿದ್ದಾರೆ.

ಬ್ಯಾನರ್‌ ವಿಚಾರಕ್ಕೆ ಶುರುವಾದ ಗಲಾಟೆ ಈಗ ಬೇರೆ ಬೇರೆ ಟರ್ನ್ ತೆಗೆದುಕೊಂಡಿದೆ. ಭರತ್ ರೆಡ್ಡಿ ಜೊತೆ ಮಾತಾಡುತ್ತೇನೆ. ಕಾರ್ಯಕ್ರಮ ಆದ್ರೆ ನಾಳೆ ಹೋಗುತ್ತೇನೆ. ಪ್ರತಿಮೆ ಮಾಡಲು ಹಿಂದೆ ಆಗಿರಲಿಲ್ಲ. ಕಂಪ್ಲಿ ಶಾಸಕರು, ಭರತ್ ಎಲ್ಲ ಸೇರಿ ಪ್ರತಿಮೆ ಮಾಡಿದ್ದಾರೆ. ನಾವು ಅಲ್ಲಿ ಏನಾಗಿದೆ ನೋಡಬೇಕು. ಕಾರ್ಯಕ್ರಮ ಮುಂದೂಡಲು ಗಲಾಟೆ ನಡೆದಿದ್ದ ಅನ್ನೋದನ್ನ ನೋಡಬೇಕು ಅಂತೇಳಿದ್ದಾರೆ.