ಮನೆ ರಾಜ್ಯ ಅಗರ ಮೆಟ್ರೋ ಕಾಮಗಾರಿ ವೇಳೆ ಅವಘಡ – ಆಯತಪ್ಪಿ ಬಿದ್ದ ಕ್ರೇನ್

ಅಗರ ಮೆಟ್ರೋ ಕಾಮಗಾರಿ ವೇಳೆ ಅವಘಡ – ಆಯತಪ್ಪಿ ಬಿದ್ದ ಕ್ರೇನ್

0

ಬೆಂಗಳೂರು : ಅಗರ ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬೃಹತ್ ಕ್ರೇನ್ ಬಿದ್ದು ಅವಘಡ ಸಂಭವಿಸಿದೆ. ಇಂದು ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಅವಘಡವಾಗಿದ್ದು, ಔಟರ್‌ರಿಂಗ್ ರೋಡ್ ಸಂಪರ್ಕ ಕಲ್ಪಿಸುವ ಬ್ಲೂಲೈನ್ ಇದಾಗಿದೆ.

ಕ್ರೇನ್‌ನ ಒಂದು ಭಾಗಕ್ಕೆ ತೂಕ ಹಾಕಿ ತಲೆ ಮೇಲಾಗಿರುವ ಕ್ರೇನ್ ಕೆಳಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೂ ಎರಡು ಬೃಹತ್ ಕ್ರೇನ್ ಬಳಸಿಕೊಂಡು ಬಿದ್ದಿರುವ ಕ್ರೇನ್ ಎತ್ತುವ ಕಾರ್ಯಾಚರಣೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ.

ಟೆಕ್ನಿಕಲ್ ಸಮಸ್ಯೆಯಿಂದ ಈ ರೀತಿಯಾಗಿದೆ. ಯಾರಿಗೂ ಗಾಯವಾಗಿಲ್ಲ, ಟೆಕ್ನಿಕಲ್ ಸಮಸ್ಯೆ ಎಂದ ಡೆಪ್ಯೂಟಿ ಚೀಫ್ ಇಂಜಿನಿಯರ್ ಸ್ಟೀಲ್ ಗರ್ಡರ್ ಮೇಲೆತ್ತುವಾಗ ಅವಘಡ ಸಂಭವಿಸಿದೆ. ಈ ವೇಳೆ ಕ್ರೇನ್‌ನ ಒಂದು ಭಾಗ ಮೇಲಕ್ಕೆ ಹೋಗಿದೆ. ಏಕಾಏಕಿ ಮೇಲಕ್ಕೆ ಹೋಗಿದೆ ಎಂದು ಬಿಎಂಆರ್‌ಸಿಎಲ್ ಡೆಪ್ಯೂಟಿ ಚೀಫ್ ಇಂಜಿನಿಯರ್ ಸದಾಶಿವ ಮಾಹಿತಿ ನೀಡಿದ್ದಾರೆ.

ನಿನ್ನೆ 100 ಟನ್ ತೂಕದ ಸ್ಟೀಲ್ ಗಾರ್ಡರ್ ಎತ್ತುವಾಗ ಅವಘಡವಾಗಿದೆ. ಕ್ರೇನ್‌ನ ಜಾಕ್ ಕಟ್ ಆದ ಪರಿಣಾಮ ಹೀಗಾಗಿದೆ. 500 ಟನ್ ತೂಕವನ್ನ ಎತ್ತುವ ಸಾಮರ್ಥ್ಯವಿರುವ ಕ್ರೇನ್ ಇದು. ಕ್ರೇನ್‌ಗೆ ಹಾಕಿದ್ದ ನಾಲ್ಕು ಜಾಕ್ (ಸ್ಟಾಂಡ್)ನಲ್ಲಿ ಒಂದು ಕಟ್ ಆಗಿರೋ ಕಾರಣದದಿಂದ ಕ್ರೇನ್ ತಲೆಮೇಲಾಗಿದೆ ಎಂದು ತಿಳಿದುಬಂದಿದೆ.