ಮನೆ ರಾಷ್ಟ್ರೀಯ ಸಿಎಂ-ಡಿಸಿಎಂ ಮಾತುಕತೆಗೆ ರಾಹುಲ್ ಗಾಂಧಿ ದೆಹಲಿಗೆ ಕರೆ – ಅಶೋಕ್ ಪಟ್ಟಣ

ಸಿಎಂ-ಡಿಸಿಎಂ ಮಾತುಕತೆಗೆ ರಾಹುಲ್ ಗಾಂಧಿ ದೆಹಲಿಗೆ ಕರೆ – ಅಶೋಕ್ ಪಟ್ಟಣ

0

ಬೆಂಗಳೂರು : ಸಿಎಂ-ಡಿಸಿಎಂರನ್ನ ಮಾತುಕತೆಗೆ ರಾಹುಲ್ ಗಾಂಧಿ ದೆಹಲಿಗೆ ಕರೆದಿದ್ದಾರೆ. ಎಲ್ಲಾ ಗೊಂದಲಗಳು ದೆಹಲಿಯಲ್ಲಿ ಇತ್ಯರ್ಥ ಆಗಲಿದೆ ಅಂತ ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ತಿಳಿಸಿದ್ದಾರೆ.

ನಿನ್ನೆ ಸಿಎಂ-ಡಿಸಿಎಂ ಜೊತೆ ರಾಹುಲ್ ಗಾಂಧಿ ಜೊತೆ ಚರ್ಚೆ ವಿಚಾರಕ್ಕೆ ವಿಧಾನಸೌಧದಲ್ಲಿ ‌ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಏನು ಮಾತುಕತೆ ಆಗಿಲ್ಲ. ಇಬ್ಬರಿಗೂ ರಾಹುಲ್ ದೆಹಲಿಗೆ ಬರೋಕೆ ಹೇಳಿದ್ದಾರೆ. ದೆಹಲಿಗೆ ಹೋದ ಮೇಲೆ ಎಲ್ಲವೂ ಸರಿ ಮಾಡ್ತೀವಿ ಅಂತ ಹೇಳಿದ್ದಾರೆ.

ಡಿಕೆಶಿ, ಸಿದ್ದರಾಮಯ್ಯ ಇಬ್ಬರನ್ನು ದೆಹಲಿಗೆ ಕರೆದಿದ್ದಾರೆ. ಡಿಕೆಶಿ ಮಾತಾಡಬೇಕು ಅಂತ ಕೇಳಿದ್ರು. ಆಗ ಇಬ್ಬರು ದೆಹಲಿಗೆ ಬನ್ನಿ ಅಂದರು. ಸಂಕ್ರಾಂತಿ ಬಳಿಕ ಕರೆಯಬಹುದು ಇಬ್ಬರು ಹೋಗ್ತಾರೆ. 100% ಗೊಂದಲ ಸರಿ ಹೋಗುತ್ತದೆ ಎಂದರು.

ನಾವೆಲ್ಲ ಕಾಂಗ್ರೆಸ್ ಶಿಸ್ತಿನ ಸಿಪಾಯಿಗಳು ಹೈಕಮಾಂಡ್ ಹೇಳಿದಂತೆ ಕೇಳ್ತೀವಿ. ರನ್ ವೇ ಯಲ್ಲಿ ಚರ್ಚೆ ಅಂತ ಅಲ್ಲ. ರಾಹುಲ್ ಅಲ್ಲಿಗೆ ಬಂದಿದ್ದರು. ಬಂದಾಗ ಮಾತಾಡಿದ್ದಾರೆ ಅಷ್ಟೆ. ಸಂಪುಟ ವಿಸ್ತರಣೆ ಸೇರಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಾರೆ. ಸಂಪುಟ ಪುನರ್‌ರಚನೆ ಆಗಬೇಕು ಅಂತ ಇದೆ. ನನ್ನದು ಬೇಡಿಕೆ ಇದೆ. ನಾನು ಮಂತ್ರಿ ಆಗಬೇಕು. ಎಲ್ಲದರ ಬಗ್ಗೆ ದೆಹಲಿಯಲ್ಲಿ ಕರೆದು ಮಾತಾಡ್ತಾರೆ ಅಂತ ತಿಳಿಸಿದರು.