ಮನೆ ಸುದ್ದಿ ಜಾಲ 1200 ವರ್ಷಗಳ ಪುರಾತನ ಬುದ್ದನ ವಿಗ್ರಹ ಇಟಲಿಯಲ್ಲಿ ಪತ್ತೆ

1200 ವರ್ಷಗಳ ಪುರಾತನ ಬುದ್ದನ ವಿಗ್ರಹ ಇಟಲಿಯಲ್ಲಿ ಪತ್ತೆ

0

ನವದೆಹಲಿ: ಭಾರತದಿಂದ  ಕಳುವಾಗಿದ್ದ ಸುಮಾರು 1,200 ವರ್ಷಗಳ ಪುರಾತನ ಬುದ್ಧನ ವಿಗ್ರಹವನ್ನು 20 ವರ್ಷಗಳ ಬಳಿಕ ಇಟಲಿಯಲ್ಲಿ ಪತ್ತೆ ಮಾಡಲಾಗಿದೆ ಎಂದು ಭಾರತೀಯ ದೂತವಾಸ ಕೇಂದ್ರ ಮಾಹಿತಿ ನೀಡಿದೆ.

ಈ ಕುರಿತು ಮಿಲನ್‌ನಲ್ಲಿರುವ ಭಾರತೀಯ ದೂತವಾಸ ಕೇಂದ್ರ ಟ್ವೀಟ್ ಮಾಡಿದ್ದು, ಭಾರತದ ಅತ್ಯಂತ ಹಳೆಯ ಮತ್ತು ವಿಶೇಷವಾದ ‘ಅವಲೋಕಿತೇಶ್ವರ ಪದ್ಮಪಾಣಿ’ ವಿಗ್ರಹವನ್ನು ಮರಳಿ ಪಡೆಯಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದೆ.
ಈ ಕಲ್ಲಿನ ವಿಗ್ರಹವು 8ರಿಂದ 12ನೇ ಶತಮಾನಕ್ಕಿಂತ ಹೆಚ್ಚು ಹಳೆಯದು ಎಂದು ಅಂದಾಜು ಮಾಡಲಾಗಿದೆ.
ಕುಂದಲಪುರ ದೇವಾಲಯದಲ್ಲಿ ಸುಮಾರು 1,200 ವರ್ಷಗಳ ಕಾಲ ವಿಗ್ರಹ  ಇತ್ತು, ಆದರೆ 2000ನೇ ಇಸವಿಯಲ್ಲಿ ಭಾರತದಿಂದ ಅಕ್ರಮವಾಗಿ ಕದ್ದು ಕಳ್ಳಸಾಗಾಟ ಮಾಡಲಾಗಿತ್ತು, ಆದರೆ ಇದೀಗ, ಇಂಡಿಯಾ ಪ್ರೈಡ್ ಪ್ರಾಜೆಕ್ಟ್, ಸಿಂಗಾಪುರ ಹಾಗೂ ಲಂಡನ್‌ನ ಆರ್ಟ್ ರಿಕವರಿ ಇಂಟರ್‌ನ್ಯಾಷನಲ್ ವಿಗ್ರಹವನ್ನು ಪತ್ತೆ ಹಚ್ಚಿವೆ.