ಮನೆ ಅಂತಾರಾಷ್ಟ್ರೀಯ ದಾವೋಸ್‌ಗೆ ತೆರಳುತ್ತಿದ್ದ ಟ್ರಂಪ್ ವಿಮಾನದಲ್ಲಿ ತಾಂತ್ರಿಕ ದೋಷ

ದಾವೋಸ್‌ಗೆ ತೆರಳುತ್ತಿದ್ದ ಟ್ರಂಪ್ ವಿಮಾನದಲ್ಲಿ ತಾಂತ್ರಿಕ ದೋಷ

0

ವಾಷ್ಟಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆರಳುತ್ತಿದ್ದ, ಏರ್‌ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಬೇಸ್‌ಗೆ ಮರಳಿದೆ.

ಸ್ವಿಟ್ಜರ್ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಭಾಗಿಯಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಳುತ್ತಿದ್ದರು. ಜಂಟಿ ನೆಲೆ ಆಂಡ್ರ‍್ಯೂಸ್‌ನಿಂದ ಮಂಗಳವಾರ (ಜ.21) ಸಂಜೆ ಹೊರಟ ಏರ್‌ಫೋರ್ಸ್ ಒನ್ ವಿಮಾನ ಟೇಕ್ ಆಫ್ ಆಗಿತ್ತು. ಅಲ್ಲಿಂದ ಹೊರಟ ಕೆಲವೇ ನಿಮಿಷಗಳ ಬಳಿಕ ಪ್ರೆಸ್ ಕ್ಯಾಬಿನ್‌ನ ದೀಪಗಳು ಸ್ವಲ್ಪ ಹೊತ್ತು ಆಫ್ ಆಗುವಂತಹ ವಿದ್ಯುತ್ ಸಮಸ್ಯೆ ಎದುರಾಗಿತ್ತು.

ವೈಟ್‌ಹೌಸ್ ಪ್ರೆಸ್ ಸೆಕ್ರಟರಿ ಕ್ಯಾರೊಲೈನ್ ಲೆವಿಟ್ ಅವರ ಮಾಹಿತಿಯಂತೆ, ಈ ತಾಂತ್ರಿಕ ಸಮಸ್ಯೆಯನ್ನು ಗುರುತಿಸಿದ ನಂತರ ಎಚ್ಚರಿಕೆಯಿಂದ ವಿಮಾನವನ್ನು ಮರಳಿ ಬೇಸ್‌ಗೆ ತಿರುಗಿಸಲಾಯಿತು. ಸುಮಾರು ಒಂದು ಗಂಟೆಯ ನಂತರ ವಿಮಾನವು ವಾಷಿಂಗ್ಟನ್ ಪ್ರದೇಶದ ಜಂಟಿ ಬೇಸ್ ಆಂಡ್ರ‍್ಯೂಸ್‌ಗೆ ಸುರಕ್ಷಿತವಾಗಿ ಮರಳಿತು. ಇದಾದ ಬಳಿಕ ಅಧ್ಯಕ್ಷ ಟ್ರಂಪ್ ಮತ್ತು ಅವರ ತಂಡವು ಬ್ಯಾಕಪ್ ವಿಮಾನದಲ್ಲಿ (ಮತ್ತೊಂದು ಏರ್ ಫೋರ್ಸ್ ಒನ್ ಎಂದು ಗುರುತಿಸಲಾದ Boeing 757) ದಾವೋಸ್‌ಗೆ ಪ್ರಯಾಣವನ್ನು ಬೆಳೆಸಿತು.