ಮನೆ ರಾಜ್ಯ ನಾಡಹಬ್ಬ ದಸರಾಗೆ ಸಿದ್ದತೆ ಆರಂಭ

ನಾಡಹಬ್ಬ ದಸರಾಗೆ ಸಿದ್ದತೆ ಆರಂಭ

0
ಸಾಂದರ್ಭಿಕ ಚಿತ್ರ

ಮೈಸೂರು(Mysuru): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುವ  ನಾಡ ಹಬ್ಬ ದಸರೆಗೆ ಸಿದ್ದತೆ ಆರಂಭಗೊಂಡಿದೆ.

ಈ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ದಸರಾ ಹೈಪವರ್ ಕಮಿಟಿ‌ ಸಭೆ ನಡೆಯಲಿದೆ.

ಆಗಸ್ಟ್ ಮೊದಲ ವಾರದಲ್ಲಿ ಗಜ ಪಯಣಕ್ಕೆ ಚಾಲನೆ ನೀಡಲು ತೀರ್ಮಾನಿಸಲಾಗಿದ್ದು, ಅರಣ್ಯ ಇಲಾಖೆ ಗಜಪಡೆ ಆಹಾರ ಪೂರೈಕೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.

ಕಳೆದ ಬಾರಿ ಕೊರೋನದಿಂದಾಗಿ  8 ಆನೆಗಳು ಮಾತ್ರ ಕರೆತರಲಾಗಿತ್ತು. ಆದರೆ ಈ ಬಾರಿ ಅರ್ಜುನ, ಅಭಿಮನ್ಯು ಸೇರಿದಂತೆ 15 ಆನೆಗಳನ್ನ ಕರೆತರಲು ಅರಣ್ಯ ಇಲಾಖೆ ನಿರ್ಧರಿಸಿದೆ.

ನವರಾತ್ರಿ ಆರಂಭದ 60 ದಿನಗಳ ಮುನ್ನ ಗಜಪಡೆ ತಾಲೀಮು ನಡೆಸಲಿದೆ.