ಮನೆ ಪ್ರವಾಸ ಭಾರತದಲ್ಲಿದೆ ಹಿಮ್ಮುಖ ಜಲಪಾತ: ಚಾರಣಿಗರಿಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿದೆ ಹಿಮ್ಮುಖ ಜಲಪಾತ: ಚಾರಣಿಗರಿಗೆ ಇಲ್ಲಿದೆ ಮಾಹಿತಿ

0

ಈ ಭೂಮಿಯು ಇನ್ನೂ ಮಾನವಕುಲದಿಂದ ಅನ್ವೇಷಿಸದ ನಿಗೂಢ ಸ್ಥಳಗಳಿಂದ ತುಂಬಿದೆ. ಭಾರತದಲ್ಲಿ ಪತ್ತೆಯಾದ ಜಲಪಾತಗಳ ವಿಸ್ಮಯದ ಬಗ್ಗೆ ಅದೆಷ್ಟೋ ಜನರಿಗೆ ತಿಳಿದಿಲ್ಲ. ಅಂತಹದೊಂದು ಜಲಪಾತ ಮಹಾರಾಷ್ಟ್ರದ ನಾನೆಕೋಟ್‌ನಲ್ಲಿದೆ.

ಮಾನವರು ಕಂಡುಹಿಡಿದ ನಿಸರ್ಗದ ಅನೇಕ ಅದ್ಭುತಗಳನ್ನು ನೋಡಿ ನಾವು ಆಶ್ಚರ್ಯಚಕಿತರಾಗಿದ್ದೇವೆ, ಆದರೆ ನಾನೆಕೋಟ್‌ನ ಹಿಮ್ಮುಖ ಜಲಪಾತ ನಮ್ಮನ್ನು ಬೆರಗುಗೊಳಿಸುವ ಅದ್ಭುತಗಳಲ್ಲಿ ಒಂದಾಗಿದೆ. ನಾನಾ ಘಾಟ್ ಎಂದೂ ಕರೆಯಲ್ಪಡುವ ನಾನೆ ಘಾಟ್ ಮಹಾರಾಷ್ಟ್ರ ರಾಜ್ಯದ ಕೊಂಕಣ ಕರಾವಳಿ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಸಮೀಪವಿರುವ ಭವ್ಯವಾದ ಪರ್ವತ ಶ್ರೇಣಿಯಾಗಿದೆ. ನಾನೆಕೋಟ್‌ನ ಬೆರಗುಗೊಳಿಸುವ ಪರ್ವತದ ಹಾದಿಯ ಪ್ರಕೃತಿ ಸೌಂದರ್ಯವನ್ನು ಸವಿಯಲಿ ನೂರಾರು ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ.

ಜೊತೆಗೆ ಪ್ರವಾಸವನ್ನು ಆನಂದಿಸಲು ಈ ತಾಣದ ಸೌದರ್ಯ ಕೂಡ ಕೈಬಿಸಿ ಕರೆಯುತ್ತದೆ. ಈ ಜಲಪಾತವು ಮುಂಬೈನಿಂದ ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣದ ಪುಣೆಯ ಜುನ್ನಾರ್ ಬಳಿ ಇದೆ. ಇದನ್ನು ಸಾಮಾನ್ಯವಾಗಿ ನಾನೆಕೋಟ್‌ ಜಲಪಾತನ, ನಾನಾ ಘಾಟ್, ನಾನೆ ಘಾಟ್ ಜಲಪಾತ ಎಂತಲೂ ಕರೆಯಲಾಗುತ್ತದೆ.

ಹಿಮ್ಮುಖ ಜಲಪಾತ ಇದು ನಿಗೂಢ ಪರ್ವತವಾಗಿದ್ದು, ವಿರುದ್ಧ ದಿಕ್ಕಿನಲ್ಲಿ ಜಲಪಾತ ಹರಿಯುತ್ತದೆ. ಅದು ಹೇಗೆ ಸಂಭವಿಸುತ್ತದೆ? ಎಂದು ನೀವು ಆಶ್ಚರ್ಯಗೊಳ್ಳಬಹುದು. ಆದರೆ ಇದು ನಿಜ. ಹಾಗಂತ ಜಲಪಾತ ಕೆಳಗಿನಿಂದ ಮೇಲಕ್ಕೆ ಹರಿಯುವುದಿಲ್ಲ. ಬದಲಿಗೆ ಈ ಜಲಪಾತದ ನೀರು ಕೇಳಗೆ ಹರಿಯುವಾಗ ವೇಗವಾದ ಗಾಳಿಯ ಬಲವಾದ ಶಕ್ತಿಯಿಂದ ಮೇಲಕ್ಕೆ ತಳ್ಳಲ್ಪಡುತ್ತದೆ.

ಕುತೂಹಲಕಾರಿಯಾಗಿ, ಈ ಟ್ರೆಕ್ಕಿಂಗ್ ಮಾರ್ಗವನ್ನು ಅನೇಕ ಶತಮಾನಗಳ ಹಿಂದೆ ವ್ಯಾಪಾರಕ್ಕಾಗಿ ಬಳಸಲಾಗುತ್ತಿತ್ತು. ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿ ಈ ಗಿರಿಧಾಮ ಬಳಕೆಗೆ ಬಂದಿದ್ದರಿಂದ ಈ ಸ್ಥಳದಲ್ಲಿರುವ ಪುರಾತನ ಗುಹೆಗಳು ಮತ್ತು ಕಲ್ಲಿನ ಮಡಕೆಗಳು ಹಿಂದಿನ ಕಥೆಗಳನ್ನು ಹೇಳುತ್ತವೆ. ಪ್ರಾಚೀನ ಗುಹೆ ದೇವನಾಗರಿ ಮತ್ತು ಬ್ರಾಹ್ಮಿ ಲಿಪಿಯ ಶಾಸನಗಳ ಜೊತೆಗೆ, 2000 ವರ್ಷಗಳಿಗಿಂತಲೂ ಹಳೆಯದು ಎಂದು ನಂಬಲಾದ ನಾನಾ ಘಾಟ್‌ ಚಾರಣ ಮಾರ್ಗದ ಕೊನೆಯಲ್ಲಿ ಒಂದು ಪ್ರಾಚೀನ ಗುಹೆ ಇದೆ. ಇದು ಈ ಪ್ರದೇಶಗಳಲ್ಲಿ ಸದಾವಗಣ ರಾಜವಂಶದ ಆಳ್ವಿಕೆಯ ಪುರಾವೆಗಳನ್ನು ಒದಗಿಸುತ್ತದೆ.

ಈ ಶಾಸನಗಳು ಸೂರ್ಯ, ಇಂದ್ರ, ವಾಸುದೇವ ಅಥವಾ ಕೃಷ್ಣ, ಚಂದ್ರ ಮತ್ತು ಯಮನಂತಹ ದೇವತೆಗಳ ಬಗ್ಗೆ ಮತ್ತು ವೇದಗಳ ವಿಧಿಗಳ ಬಗ್ಗೆ ಮತ್ತು ಸಾದವಕನ ದೊರೆಗಳ ಬಗ್ಗೆ ಕೆಲವು ಐತಿಹಾಸಿಕ ಮಾಹಿತಿಯನ್ನು ಒದಗಿಸುತ್ತವೆ ಎಂದು ಪುರಾತತ್ತ್ವಜ್ಞರು ಹೇಳುತ್ತಾರೆ.

ನಾನಕೋಟ್‌ಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಈ ಸ್ಥಳವನ್ನು ನೋಡಿದಾಗ ಭೂಮಿಯ ಮೇಲಿನ ಸ್ವರ್ಗದಂತೆ ಕಾಣಿಸುತ್ತದೆ ಎಂದು ಹೇಳುತ್ತಾರೆ. ಹೋಗುವುದು ಹೇಗೆ? : ನಾನೆಕೋಟ್ ಚಾರಣ ಉತ್ಸಾಹಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಇಲ್ಲಿಗೆ ಟ್ರೆಕ್ಕಿಂಗ್ ಗೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಉತ್ಸಾಹದಿಂದ ಟ್ರೆಕ್ಕಿಂಗ್ ಮಾಡುವ ನೀವು ಗುರುತ್ವಾಕರ್ಷಣೆಯ ನಿಯಮವನ್ನು ತಿಳಿದಿಲ್ಲದ ಸುಂದರವಾದ ಬಿಳಿ ಜಲಪಾತವನ್ನು ನೋಡಬಹುದು.

ಆದರೆ, ನೀರಿನ ರಭಸ ಹೆಚ್ಚಿರುವಾಗ ಈ ವಿಚಿತ್ರ ವಿದ್ಯಮಾನ ಕಣ್ಣಿಗೆ ಹಬ್ಬವಾಗುವುದರಿಂದ ಮಳೆಗಾಲದಲ್ಲಿ ನಾನಾಕೋಟ್ ಜಲಪಾತವನ್ನು ನೋಡುವುದು ಒಳ್ಳೆಯದು ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಇಲ್ಲಿಗೆ ಹೋಗಲು ಕಲ್ಯಾಣ್ ಬಸ್ ನಿಲ್ದಾಣದಿಂದ ಬಸ್ ತೆಗೆದುಕೊಂಡು ಜುನ್ನಾರ್‌ನಲ್ಲಿ ಇಳಿಯಬಹುದು. ಅಲ್ಲಿಂದ ಸುಲಭವಾಗಿ ರಸ್ತೆಯ ಮೂಲಕ ನಾನಾ ಘಾಟ್ ತಲುಪಬಹುದು. ಪರ್ಯಾಯವಾಗಿ ಮುಂಬೈ ಮತ್ತು ಪುಣೆಯಿಂದ ಮಾರ್ಗದರ್ಶಿ ಪ್ರವಾಸಗಳನ್ನು ಆಯ್ಕೆ ಮಾಡಬಹುದು.

ಪ್ರತಿ ವ್ಯಕ್ತಿಗೆ ರೂ 750 ರಿಂದ ಈ ಪ್ರವಾಸ ಪ್ರಾರಂಭವಾಗುತ್ತದೆ. ಮಾಡಬೇಕಾದ ಕೆಲಸಗಳು ಪರ್ವತ ಶ್ರೇಣಿಯ ಬಳಿ ಬಲವಾದ ಗಾಳಿಯಿಂದಾಗಿ ಇಲ್ಲಿನ ಪರಿಸರ ತಣ್ಣಗಾಗಿರುತ್ತದೆ. ಹೀಗಾಗಿ ಕೆಲವು ಅಗತ್ಯ ಔಷಧಗಳು ಮತ್ತು ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ. ಅಲ್ಲದೆ, ನೀವು ಜಲಪಾತಗಳವರೆಗೆ ಪಾದಯಾತ್ರೆಗೆ ಹೋದರೆ ನಿಮಗೆ ಬಾಯಾರಿಕೆ ಮತ್ತು ಹಸಿವಿನ ಅನುಭವವಾಗುವುದರಿಂದ ಛತ್ರಿ, ಕೆಲವು ತಿಂಡಿಗಳು, ಬಿಸ್ಕತ್ತು ಪಾಕೆಟ್‌ಗಳು ಮತ್ತು ನೀರಿನ ಬಾಟಲಿಯನ್ನು ಒಯ್ಯಿರಿ. ಟ್ರಕ್ಕಿಂಗ್ ಶೂಗಳನ್ನು ಧರಿಸುವುದು ಉತ್ತಮ.

ವಿಶೇಷವಾಗಿ ಮಳೆಗಾಲದ ವೇಳೆ. ಸಂದರ್ಶಕರ ಅನುಕೂಲಕ್ಕಾಗಿ ಮಾರ್ಗಗಳನ್ನು ಚೆನ್ನಾಗಿ ಗುರುತಿಸಲಾಗಿದೆ. ಪರ್ಯಾಯವಾಗಿ, ಸಂದರ್ಶಕರು ತಮ್ಮ ವಾಹನವನ್ನು ಬೆಟ್ಟದ ತುದಿಗೆ ಓಡಿಸಬಹುದು ಮತ್ತು ಅಲ್ಲಿರುವ ಸಣ್ಣ ಟೆರೇಸ್‌ನಲ್ಲಿ ಬಿಸಿ ತಿಂಡಿಗಳು ಮತ್ತು ಚಹಾವನ್ನು ಆನಂದಿಸಬಹುದು.