ಮನೆ ರಾಜ್ಯ ಮೈಸೂರು: 3 ವರ್ಷದ ಗಂಡು ಚಿರತೆ ಸೆರೆ

ಮೈಸೂರು: 3 ವರ್ಷದ ಗಂಡು ಚಿರತೆ ಸೆರೆ

0

ಮೈಸೂರು(Mysuru): ತಾಲ್ಲೂಕಿನ ಶ್ಯಾದನಹಳ್ಳಿಯ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಭಾನುವಾರ ರಾತ್ರಿ‌ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಕ್ಯಾಂಪಸ್ ಹಿಂಭಾಗದಲ್ಲಿ ಈ ತೋಟವಿದೆ. ಇಲಾಖೆಯು ವಾರದ ಹಿಂದೆಯಷ್ಟೇ ಬೋನು ಇರಿಸಿತ್ತು. ಆರ್‌’ಎಫ್’ಒ ಕೆ.ಸುರೇಂದ್ರ ನೇತೃತ್ವದ ‌ಸಿಬ್ಬಂದಿ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಸೋಮವಾರ ರವಾನಿಸಿದರು.

ವರ್ಷದ ಹಿಂದೆ ಆರ್’ಬಿಐ ಕ್ಯಾಂಪಸ್’ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಆದರೆ, ಪತ್ತೆಯಾಗಿರಲಿಲ್ಲ.

ಹಿಂದಿನ ಲೇಖನಮಕ್ಕಳ ದತ್ತು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ: ಡಾ. ಕೆ.ವಿ ರಾಜೇಂದ್ರ
ಮುಂದಿನ ಲೇಖನಸುಪ್ರೀಂಕೋರ್ಟ್: ಐವರು ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ