ಮನೆ ರಾಜ್ಯ ಫೆನಾಯಿಲ್ ಘಟಕದ ಹೆಸರಲ್ಲಿ ಡ್ರಗ್ಸ್ ತಯಾರಿಕೆ; ಗುಜರಾತ್‌ ಪೆಡ್ಲರ್‌ನಿಂದ ಸಿಕ್ತು ಲಿಂಕ್‌..!

ಫೆನಾಯಿಲ್ ಘಟಕದ ಹೆಸರಲ್ಲಿ ಡ್ರಗ್ಸ್ ತಯಾರಿಕೆ; ಗುಜರಾತ್‌ ಪೆಡ್ಲರ್‌ನಿಂದ ಸಿಕ್ತು ಲಿಂಕ್‌..!

0

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಡ್ರಗ್ಸ್ ತಯಾರಿಕೆಗೆ ಸೇಫ್‌ ಜೋನ್ ಆಗ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇವತ್ತು ಕೇಂದ್ರ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಭಾರೀ ಪ್ರಮಾಣದ ಡ್ರಗ್ಸ್ ತಯಾರಿಕೆಯ ಘಟಕದ ಮೇಲೆ ದಾಳಿ ಮಾಡಿದ್ದಾರೆ.

ನಗರದ ಹೆಬ್ಬಾಳದಲ್ಲಿರುವ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ತಯಾರಿಕಾ ಘಟಕದ ಮೇಲೆ ಈ ದಾಳಿ ನಡೆದಿದೆ. ಈ ಘಟಕ ಬೋರೇಗೌಡ ಎಂಬ ವ್ಯಕ್ತಿಗೆ ಸೇರಿದ್ದು, 1 ವರ್ಷದ ಹಿಂದೆ ಗಣಪತ್ ಪಾಲ್ ಎಂಬ ವ್ಯಕ್ತಿಗೆ ಬಾಡಿಗೆ ಕೊಟ್ಟಿದ್ದರು.

ಫೆನಾಯಿಲ್ ತಯಾರಿಕೆಗಾಗಿ ಕಟ್ಟಡ ಬಾಡಿಗೆ ಕೊಟ್ಟಿದ್ದರಂತೆ. ಆದ್ರೆ ಗುಜರಾತ್ ನಲ್ಲಿ ಇತ್ತೀಚೆಗೆ ಡ್ರಗ್‌ಪೆಡ್ಲರ್‌ ವೊಬ್ಬ ಸಿಕ್ಕಿಬಿದ್ದಿದ್ದ. ಅವನಿಗೂ ಗಣಪತ್ ಲಾಲ್ ಗೂ ಸಂಬಂಧ ಇದೆ ಎನ್ನಲಾಗಿದೆ‌. ಹೀಗಾಗಿ ಈ ಫೆನಾಯಿಲ್‌ ತಯಾರಿಕಾ ಘಟಕದ ಮೇಲೆ ದಾಳಿ ನಡೆದಿದೆ.