ಮನೆ ರಾಷ್ಟ್ರೀಯ ಮೊಬೈಲ್​ ಗಾಗಿ ಜಲಾಶಯದ ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿಗೆ ಅಮಾನತು ಶಿಕ್ಷೆ

ಮೊಬೈಲ್​ ಗಾಗಿ ಜಲಾಶಯದ ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿಗೆ ಅಮಾನತು ಶಿಕ್ಷೆ

0

ಛತ್ತೀಸ್‌ಗಢ: ಕಳೆದು ಹೋದ ತನ್ನ ದುಬಾರಿ ಫೋನ್ ಹುಡುಕಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಪೋಲು ಮಾಡಿದ ಛತ್ತೀಸ್‌ ಗಢ ಅಧಿಕಾರಿ ರಾಜೇಶ್ ಬಿಸ್ವಾಸ್ ಅವರನ್ನು ಸರ್ಕಾರ ಅಮಾನತು ಮಾಡಿದೆ.

Join Our Whatsapp Group

ಕೊಯಿಲೀಬೇಡಾದ ಕಂಕೇರ ಜಿಲ್ಲೆಯ ಆಹಾರ ವಿಭಾಗದ ಅಧಿಕಾರಿ ರಾಜೇಶ್​ ಬಿಸ್ವಾಸ್ ಎನ್ನುವವರ ರೂ. 1 ಲಕ್ಷ ಮೌಲ್ಯದ ಫೋನ್​ ಅಕಸ್ಮಾತ್​ ಆಗಿ ಜಲಾಶಯದಲ್ಲಿ ಬಿದ್ದ ಪರಿಣಾಮ, ಅದನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ತೊಡಗಿಕೊಂಡರು.

ಹತ್ತಿರದ ನಾಲೆಗೆ ನೀರನ್ನು ಹರಿಬಿಟ್ಟು ನನ್ನ ಫೋನ್ ​ನ್ನು ಹುಡುಕಬೇಕೆಂದುಕೊಂಡಿದ್ದೇನೆ ಎಂದು ಮೌಖಿಕವಾಗಿ ಸ್ಥಳೀಯ ಉಪವಿಭಾಗಾಧಿಕಾರಿಗಳ ಬಳಿ ಕೇಳಿಕೊಂಡೆ. ಆಗ ಅವರು, ಮೂರರಿಂದ ನಾಲ್ಕು ಅಡಿ ನೀರನ್ನು ಜಲಾಶಯದಿಂದ ಹರಿಬಿಟ್ಟರೆ ಸ್ಥಳೀಯ ರೈತರಿಗೂ ಪ್ರಯೋಜನವಾಗಬಹುದು ಆಗಲಿ ಎಂದು ಅನುಮತಿ ನೀಡಿದರು. ನಂತರ ಸ್ಥಳೀಯರ ಸಹಾಯದಿಂದ ಜಲಾಶಯದೊಳಗೆ ಬಿದ್ದ ಮೊಬೈಲ್​ ಅನ್ನು ಮರಳಿ ಪಡೆದುಕೊಂಡೆ ಎಂದಿದ್ದಾರೆ ರಾಜೇಶ್​.

ಆದರೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಯು ಐದು ಅಡಿಗಳವರೆಗೆ ನೀರು ಹರಿಬಿಡಲು ಮಾತ್ರ ಅನುಮತಿ ನೀಡಿದ್ದರು ಎನ್ನುವುದು ತಿಳಿದುಬಂದಿದೆ. ಉಳಿದಂತೆ ರಾಜೇಶ್ ಬಿಸ್ವಾಸ್  ಅವರ ಈ ನಡೆಯಿಂದ ಈ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಬಹುದೆಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

ಆರಂಭದಲ್ಲಿ ಸ್ಥಳೀಯ ನಿವಾಸಿಗಳು ನೀರಿಗೆ ಧುಮುಕಿ ಮೊಬೈಲ್​ ಅನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ನೀರಿನಾಳ ಹೆಚ್ಚಿದುದರಿಂದ ಪ್ರಯತ್ನ ವಿಫಲವಾಗಿದೆ. ಆಗ ಈ ಅಧಿಕಾರಿ ತನ್ನ ಫೋನ್​ ಅನ್ನು ಮರಳಿ ಪಡೆಯಲೇಬೇಕು ಎಂಬ ಜಿದ್ದಿಗೆ ಬಿದ್ದು ಇಂಥ ಅರ್ಥಹೀನ ಆಲೋಚನೆಯನ್ನು ಕಾರ್ಯಗತಗೊಳಿಸಿದ್ದಾರೆ. ಸತತ ಮೂರು ದಿನಗಳ ಕಾಲ ಎರಡು 30hp ಡೀಸಲ್​ ಪಂಪ್​ಗಳ ಸಹಾಯದಿಂದ ನೀರುಹರಿಬಿಡುವಿಕೆಯ ಕಾರ್ಯಾಚರಣೆಯನ್ನು ನಡೆಸಲಾಗಿದೆ. ವಿಷಯ ತಿಳಿದ ನಂತರ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಪಂಪ್​ಗಳನ್ನು ಸ್ಥಗಿತಗೊಳಿಸಿದ್ದಾರಾದರೂ 21 ಲಕ್ಷ ಲೀಟರಿಗೂ ಹೆಚ್ಚು ನೀರು ಪೋಲಾಗಿದೆ.

ಹಿಂದಿನ ಲೇಖನಪ್ರವೀಣ್‌ ನೆಟ್ಟಾರು ಪತ್ನಿ ನೇಮಕಾತಿ ರದ್ದು
ಮುಂದಿನ ಲೇಖನಸಂಪುಟ ವಿಸ್ತರಣೆ: ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು