ಮನೆ ಮನರಂಜನೆ ಮುಕ್ತಾಯ ಹಂತದಲ್ಲಿ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾದ ಚಿತ್ರೀಕರಣ

ಮುಕ್ತಾಯ ಹಂತದಲ್ಲಿ ದರ್ಶನ್‌ ಅಭಿನಯದ ಕ್ರಾಂತಿ ಸಿನಿಮಾದ ಚಿತ್ರೀಕರಣ

0

ಬೆಂಗಳೂರು (Bengaluru): ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ʻಕ್ರಾಂತಿʼ ಸಿನಿಮಾದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ಆದಷ್ಟು ಬೇಗ ತೆರೆಗೆ ಬರಲಿದೆ.

ದರ್ಶನ್​ನಟನೆಯ ಬಹು ನಿರೀಕ್ಷಿತ​ಸಿನಿಮಾ ಕ್ರಾಂತಿ. ಕ್ರಾಂತಿ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಈಗಾಗಲೇ ಬಹುತೇಕ ಶೂಟಿಂಗ್​ಮುಕ್ತಾಯವಾಗಿದೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ​​​​​ನಾಯಕಿಯಾಗಿ ನಟಿಸುತ್ತಿದ್ದಾರೆ.

ಈಗಾಗಲೇ ಫಸ್ಟ್​ಲುಕ್ ಟೀಸರ್ ​ರಿಲೀಸ್ ​ಆಗಿ ಕುತೂಹಲ ಹೆಚ್ಚಿಸಿದೆ. ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಟ್ಟಿರುವ ನಿರ್ಮಾಪಕಿ ಶೈಲಜಾ ನಾಗ್ ಇದು ಅಕ್ಷರ ಕ್ರಾಂತಿ ಕುರಿತಾದ ಸಿನಿಮಾ ಎಂದಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್​ ಮಾಡಿ ಮುಗಿಸಿರುವ ಸಿನಿಮಾ ತಂಡ ಎರಡು ಹಾಡುಗಳು​​ಮತ್ತು ಕೆಲವು ಸನ್ನಿವೇಶಗಳ ಚಿತ್ರೀಕರಣಕ್ಕಾಗಿ ಕ್ರಾಂತಿ ಚಿತ್ರತಂಡ ವಿದೇಶಕ್ಕೆ ಹೊರಟಿದೆ.

15 ದಿನಗಳ ಕಾಲ ವಿದೇಶದಲ್ಲಿ ಬೀಡುಬಿಟ್ಟು ಅದ್ಭುತ ಲೊಕೇಷನ್​ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಚಿತ್ರದಲ್ಲಿ ದರ್ಶನ್‌ ​ಎನ್​​ಆರ್​​​ಐ ಪಾತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ವಿದೇಶದಲ್ಲಿ ಒಂದಷ್ಟು ಸನ್ನಿವೇಶಗಳನ್ನು ಚಿತ್ರಿಸುವ ಸಾಧ್ಯತೆಯಿದೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಇರುವ ಕಾರಣಕ್ಕೆ ಚಿತ್ರದ ಹಾಡುಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ನವೆಂಬರ್​​1ರಂದು ರಾಜ್ಯೋತ್ಸವದ ಸಂಭ್ರಮದಲ್ಲೇ ಸಿನಿಮಾ ರಿಲೀಸ್​ಗೆ ಪ್ರಯತ್ನ ನಡೀತಿದೆ. ಅಭಿಮಾನಿಗಳು ಸಿನಿಮಾ ನೋಡೋಕೆ ಕಾತರದಿಂದ ಕಾಯ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಟ್ರೈಲರ್​, ಸಾಂಗ್ಸ್ ​ರಿಲೀಸ್ ​ಆಗಲಿದೆ. ಬಳಿಕ ಚಿತ್ರದ ಪ್ರಮೋಷನ್ ಕೂಡ ಆರಂಭವಾಗಲಿದೆ.

ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳೋದರ ಜೊತೆಗೆ ಮ್ಯೂಸಿಕ್ ​ಕಂಪೋಸ್​ ಮಾಡ್ತಿದ್ದಾರೆ. ರಾಬರ್ಟ್ ​ಚಿತ್ರದ ನಂತರ ನಟ ದರ್ಶನ್ ​ನಟಿಸುತ್ತಿರುವ ಸಿನಿಮಾ ಇದಾಗಿದೆ.