ಮನೆ ಸುದ್ದಿ ಜಾಲ ಅನುಮಾನಾಸ್ಪದ ವಸ್ತು ಸ್ಫೋಟ – ಮೂವರ ಸ್ಥಿತಿ ಗಂಭೀರ..!

ಅನುಮಾನಾಸ್ಪದ ವಸ್ತು ಸ್ಫೋಟ – ಮೂವರ ಸ್ಥಿತಿ ಗಂಭೀರ..!

0

ಬೀದರ್ : ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ಓರ್ವ ಬಾಲಕ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹುಮ್ನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ನಡೆದಿದೆ.

ಮೂವರ ಮುಖ, ಮೈ, ಕೈ ಸುಟ್ಟಿದ್ದು ಎಲ್ಲರನ್ನೂ ಬ್ರೀಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ಅನ್ವರ್ ಪಷಾ ಎಂಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್‌ಗೆ ರವಾನೆ ಮಾಡಲಾಗಿದೆ. ವಸ್ತು ಬ್ಲಾಸ್ಟ್‌ ಆದಾಗ ಪಕ್ಕದಲ್ಲೇ ಆರು ಜನ ಮಕ್ಕಳು ಮತ್ತು ಇಬ್ಬರು ಯುವರು ನಿಂತಿದ್ದರು ಎಂದು ತಿಳಿದು ಬಂದಿದೆ.

ಮತ್ತೊಬ್ಬ ಗಾಯಾಳು ಜಬ್ಬಾರ್ ಸಾಬ್ (65 ) ಎಂಬವರನ್ನು ಸೋಲ್ಲಾಪೂರ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಎಂದು ಹೇಳಲಾಗಿದೆ.