ಮನೆ ರಾಜ್ಯ ಮಾನವರಹಿತ ಡಿಆರ್‌ಡಿಒ ಯುದ್ಧ ವಿಮಾನ ಯಶಸ್ವಿ ಹಾರಾಟ

ಮಾನವರಹಿತ ಡಿಆರ್‌ಡಿಒ ಯುದ್ಧ ವಿಮಾನ ಯಶಸ್ವಿ ಹಾರಾಟ

0

ಚಿತ್ರದುರ್ಗ (Chitradurga): ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವ ಮೊದಲ ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಚಳ್ಳಕೆರೆ ತಾಲ್ಲೂಕಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಾಯುನೆಲೆಯಲ್ಲಿ ಶುಕ್ರವಾರ ಯಶಸ್ವಿಯಾಯಿತು.

ಇದರಿಂದ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ಭಾರತ, ಮಾನವರಹಿತ ವಿಮಾನಗಳ ಅಭಿವೃದ್ಧಿಯಂತಹ ಕ್ಲಿಷ್ಟಕರ ತಂತ್ರಜ್ಞಾನದಲ್ಲಿಯೂ ಮೈಲುಗಲ್ಲು ಸಾಧಿಸಿದಂತಾಯಿತು.

ಡಿಆರ್‌ಡಿಒದ ಈ ಸಾಧನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ವಿಮಾನ ನಿರ್ಮಾಣದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ತರ ಸಾಧನೆಯಾಗಿದೆ. ಆತ್ಮನಿರ್ಭರ ಭಾರತದ ದಾರಿಯನ್ನು ಇದು ಸುಗಮಗೊಳಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಅಂಗಸಂಸ್ಥೆ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ವೈಮಾನಿಕ ವಾಹನವನ್ನು ನಿರ್ಮಿಸುವ, ವಿನ್ಯಾಸಗೊಳಿಸುವ ಹಾಗೂ ನಿಯಂತ್ರಿಸುವ ಏವಿಯಾನಿಕ್ಸ್‌ ವ್ಯವಸ್ಥೆಯನ್ನು ಸ್ಥಳೀಯವಾಗಿ ಸಿದ್ಧಗೊಂಡ ವಿಮಾನವು ಒಳಗೊಂಡಿದೆ.