ಮನೆ ಸುದ್ದಿ ಜಾಲ ನನ್ನನ್ನು ನೋಡಿಕೊಳ್ಳದಿದ್ದರೆ, ವಿಡಿಯೋ ಔಟ್‌ – ಕಮಲಾಕರ್ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್..!

ನನ್ನನ್ನು ನೋಡಿಕೊಳ್ಳದಿದ್ದರೆ, ವಿಡಿಯೋ ಔಟ್‌ – ಕಮಲಾಕರ್ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್..!

0

ಕಾರವಾರ : ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು ಸುಚಿತ್ರಾ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕಿದ್ದಾಳೆ ಎಂದು ಸುಚಿತ್ರಾ ಪತಿ ಮಹೇಶ್ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ.

ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್ ಮಾಡಿ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಮಹೇಶ್ ನಾಯ್ಕ ಪಬ್ಲಿಕ್‌ ಟಿವಿಗೆ ಹೇಳಿದ್ದಾರೆ.

ಕಮಲಾಕರ್ ಸಂಪರ್ಕಕ್ಕೆ ಬಂದ ಬಳಿಕ ಸುಚಿತ್ರಾ ಖಾಸಗಿ ಖಾಸಗಿ ಕ್ಷಣಗಳ ವಿಡಿಯೋ ಮಾಡಿಟ್ಟುಕೊಂಡಿದ್ದಳು. ಮಕ್ಕಳ ಜತೆ ನಾನು ನಿನ್ನ ಜತೆ ಬರುತ್ತೇನೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸುತ್ತಿದ್ದಳು. ಹೀಗಾಗಿ ಮರ್ಯಾದೆಗೆ ಅಂಜಿ ಕಮಲಾಕರ್ ಭಟ್‌ ಆಕೆಯನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಎಂದು ತಿಳಿಸಿದರು.

ಈ ವಿಚಾರವನ್ನು ನನ್ನ ಮಗಳು ಈಗ ತಿಳಿಸಿದ್ದಾಳೆ. ಮೊದಲು ಭಯದಿಂದ ಮಗಳು ಈ ವಿಚಾರವನ್ನು ತಿಳಿಸಿರಲಿಲ್ಲ. ಆದರೆ ಈಗ ಸುಚಿತ್ರಾ ಬ್ಲ್ಯಾಕ್‌ಮೇಲ್‌ ಮಾಡಿರುವ ಬಗ್ಗೆ ತನ್ನ ಜೊತೆ ಹೇಳಿದ್ದಾಳೆ ಎಂದು ಮಹೇಶ್ ನಾಯ್ಕ ತಿಳಿಸಿದ್ದಾರೆ.