ಮನೆ ರಾಜ್ಯ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಸಿಎಂ ಜೊತೆ ಚರ್ಚೆ – ಚಲುವರಾಯಸ್ವಾಮಿ

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಸಿಎಂ ಜೊತೆ ಚರ್ಚೆ – ಚಲುವರಾಯಸ್ವಾಮಿ

0

ಬೆಂಗಳೂರು : ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹಾಕಿರೋ ವಿಚಾರವನ್ನು ಸಿಎಂ ಗಮನಕ್ಕೆ ತಂದು ಸರಿ ಮಾಡಿಸುತ್ತೇನೆ ಅಂತ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ.

ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳ ನಿಯಂತ್ರಣದ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಸೂಚನೆ ಕೊಟ್ಟಿದ್ದಾರೆ ಗೊತ್ತಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕೊಟ್ಟಿದ್ದರೆ ಸಿಎಂ ಗಮನಕ್ಕೆ ಅದನ್ನು ತರುತ್ತೇನೆ ಎಂದರು. ಮಾಧ್ಯಮಗಳು ಮುಖ್ಯ ಸಿಎಂ ಗಮನಕ್ಕೆ ತಂದು ಮಾಧ್ಯಮಗಳಿಗೆ ಅವಕಾಶ ಕೊಡೋ ಕೆಲಸ ಮಾಡಿಸುತ್ತೇನೆ ಎಂದು ತಿಳಿಸಿದರು.