ಮನೆ ಸುದ್ದಿ ಜಾಲ ಟೀಂ ಇಂಡಿಯಾ ಕ್ರಿಕೆಟಿಗ ರಾಹುಲ್ ಚಹರ್-ಇಶಾನಿ ವಿಚ್ಛೇದನ..!

ಟೀಂ ಇಂಡಿಯಾ ಕ್ರಿಕೆಟಿಗ ರಾಹುಲ್ ಚಹರ್-ಇಶಾನಿ ವಿಚ್ಛೇದನ..!

0

ನವದೆಹಲಿ : ಟೀಂ ಇಂಡಿಯಾ ಕ್ರಿಕೆಟಿಗ ರಾಹುಲ್ ಚಹರ್ ತಮ್ಮ ಪತ್ನಿ ಇಶಾನಿ ಜೋಹರ್ ಜೊತೆಗಿನ 4 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದು, ವಿಚ್ಛೇಧನ ಘೋಷಿಸಿದ್ದಾರೆ. 2022ರಲ್ಲಿ ರಾಹುಲ್ ಇಶಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಛೇದನ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ರಾಹುಲ್ ಮಾಹಿತಿ ಹಂಚಿಕೊಂಡಿದ್ದಾರೆ. `ನಾನು ನನ್ನ ಜೀವನ ಅರ್ಥ ಮಾಡಿಕೊಳ್ಳುವ ಮೊದಲೇ ಮದುವೆಯಾಗಿದ್ದೆ. ಆ ಬಳಿಕ ನಿರೀಕ್ಷಿಸದ ಪಾಠಗಳು ಎದುರಾಗಿತ್ತು.

ಕೆಲವು ಸಂಬಂಧಗಳು ಶಾಶ್ವತವಾಗಿ ನಮ್ಮೊಂದಿಗೆ ಉಳಿಯದಿದ್ದರೂ ಕೂಡ ಆ ಸಂಬಂಧಗಳಿಂದ ಕಲಿತ ಪಾಠ ಎಂದಿಗೂ ನಮ್ಮೊಂದಿಗೆ ಇರುತ್ತದೆ. ನಾನು ಬುದ್ಧಿವಂತವಾಗಿ, ಹೆಚ್ಚು ಅರಿವಿನೊಂದಿಗೆ ಜೀವನ ಮುಂದುವರಿಸಲು ಇಷ್ಟಪಡುತ್ತೇನೆ. ಈಗ ಅಧಿಕೃತವಾಗಿ ಅಧ್ಯಾಯ ಕೊನೆಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ.